ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ: ಈ ಬಾರಿಯೂ ವಿದ್ಯಾರ್ಥಿನಿಯರೇ ಮೆಲುಗೈ

ಬೆಂಗಳೂರು, ಏ.30- ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟಾರೆ ಶೇ.59.56ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರು ಮೆಲುಗೈ ಸಾಧಿಸಿದ್ದು, ಶೇ.67.11ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.
ಮಾ.1ರಿಂದ 17ರ ವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು 1004 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಶಿಖಾ ಅವರು ತಿಳಿಸಿದರು.

ಈ ಬಾರಿಯ ಪಿಯು ಪರೀಕ್ಷೆಯಲ್ಲಿ 6,85,713 ವಿದ್ಯಾರ್ಥಿಗಳು ಹಾಜರಾಗಿದ್ದರು. ಹೊಸಬರು 5,34,478 ಮಂದಿ ಹಾಜರಾಗಿದ್ದರು. 3,64,983 ಮಂದಿ ತೇರ್ಗಡೆಯಾಗಿದ್ದು, ಒಟ್ಟಾರೆ ಶೇ.68.29ರಷ್ಟು ಫಲಿತಾಂಶ ಬಂದಿದೆ.

ಪುನರಾವರ್ತಿತ 1,22,802 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 36,108 ಮಂದಿ ತೇರ್ಗಡೆಯಾಗಿದ್ದು, ಒಟ್ಟಾರೆ ಶೇ.29.40ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಖಾಸಗಿಯಾಗಿ 28,428 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 7330 ಮಂದಿ ತೇರ್ಗಡೆಯಾಗಿದ್ದು, ಶೇ.25.78ರಷ್ಟು ಫಲಿತಾಂಶ ಬಂದಿದೆ.

ಎಲ್ಲ ಒಟ್ಟು 6,85,713 ವಿದ್ಯಾರ್ಥಿಗಳ ಪೈಕಿ 4,08,421 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.59.56ರಷ್ಟು ಫಲಿತಾಂಶ ಬಂದಿದೆ. 3,49,592 ಮಂದಿ ಬಾಲಕರಲ್ಲಿ 1,82,852 ಮಂದಿ ತೇರ್ಗಡೆಯಾಗಿದ್ದು, ಶೇ.52.30ರಷ್ಟು ಫಲಿತಾಂಶ ಬಂದಿದೆ. 3,36,121 ಬಾಲಕಿಯರಲ್ಲಿ 2,25,569 ಮಂದಿ ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದು, ಶೇ.67.11ರಷ್ಟು ಫಲಿತಾಂಶ ಬಂದಿದೆ.

ಕನ್ನಡ ಮಾಧ್ಯಮದಲ್ಲಿ ಶೇ.51.56ರಷ್ಟು ಫಲಿತಾಂಶ ಬಂದಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಶೇ.66.06ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗ- ಶೇ.45.13, ವಾಣಿಜ್ಯ ವಿಭಾಗ- ಶೇ.63.64, ವಿಜ್ಞಾನ ವಿಭಾಗ-ಶೇ.67.48ರಷ್ಟು ಫಲಿತಾಂಶ ಬಂದಿದೆ.

ಶೇ.85ಕ್ಕಿಂತ ಹೆಚ್ಚು ಅಂಕ ಪಡೆದವರು 54,692 ವಿದ್ಯಾರ್ಥಿಗಳು. ಪ್ರಥಮ ದರ್ಜೆ- 2,13,611, ದ್ವಿತೀಯ ದರ್ಜೆ- 82,532, ತೃತೀಯ ದರ್ಜೆ- 57,586 ವಿದ್ಯಾರ್ಥಿಗಳು.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದು, ಶೇ.91.49ರಷ್ಟು ಫಲಿತಾಂಶ ಪಡೆದಿದೆ. ಚಿಕ್ಕೋಡಿ ಶೇ.52.20 ಫಲಿತಾಂಶ ಪಡೆದು ಕೊನೆಯ ಸ್ಥಾನದಲ್ಲಿದೆ.
ಬೆಂಗಳೂರು ದಕ್ಷಿಣ ಶೇ.73.67 ಪಡೆದು 9ನೆ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಶೇ.68.82ರಷ್ಟು ಫಲಿತಾಂಶ ಪಡೆದು 13ನೆ ಸ್ಥಾನದಲ್ಲಿದೆ. ಬೆಂಗಳೂರು ಉತ್ತರ 71.68 ಫಲಿತಾಂಶ ಪಡೆದು 11ನೆ ಸ್ಥಾನದಲ್ಲಿದೆ.

ಶೇ.100ರಷ್ಟು ಫಲಿತಾಂಶ: ಸರ್ಕಾರಿ ಪದವಿ ಪೂರ್ವ ಕಾಲೇಜು 25, ಅನುದಾನ ರಹಿತ ಕಾಲೇಜು 41, ಅನಿದಾನಿತ ಕಾಲೇಜು 2. ಒಟ್ಟು 68 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.
ಶೂನ್ಯ ಫಲಿತಾಂಶ: ಸರ್ಕಾರಿ ಕಾಲೇಜುಗಳು 3, ಅನುದಾನಿತ ಕಾಲೇಜುಗಳು 3, ಅನುದಾನ ರಹಿತ ಕಾಲೇಜುಗಳು 112. ಒಟ್ಟಾರೆ 118 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ ಎಂದು ಶಿಖಾ ಅವರು ತಿಳಿಸಿದರು.
ಕಳೆದ ವರ್ಷಕ್ಕಿಂತ ಈ ಬಾರಿ 7.12ರಷ್ಟು ಫಲಿತಾಂಶ ಹೆಚ್ಚಾಗಿದೆ. ಇದಕ್ಕೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದುದು ಕಾರಣ ಎಂದು ಶಿಖಾ ತಿಳಿಸಿದರು.
ಕಳೆದ ವರ್ಷ 52.32ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 59.56ರಷ್ಟು ಫಲಿತಾಂಶ ಬಂದಿದೆ.
ನ್ಯೂನ್ಯತೆ ಸರಿಪಡಿಸಲು ಸೂಚನೆ: ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪ್ರಕಟಿತ ಫಲಿತಾಂಶದಲ್ಲಿ ನ್ಯೂನ್ಯತೆ ಇದ್ದರೆ ಮೇ 15ರೊಳಗೆ ಗುರುತಿಸಿದ ವಿದ್ಯಾರ್ಥಿಗಳು ಪಟ್ಟಿಯೊಂದಿಗೆ ಇತರೆ ಪೂರಕ ದಾಖಲೆಗಳನ್ನು ಕೇಂದ್ರ ಕಚೇರಿಗೆ ಖುದ್ದಾಗಿ ಒದಗಿಸಿ ಫಲಿತಾಂಶ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ.
ಎಸ್‍ಸಿ ಶೇ.49.09, ಎಸ್‍ಟಿ ಶೇ.59.59, ಪ್ರವರ್ಗ-1 ಶೇ.57.55, ಪ್ರವರ್ಗ-2ಎ ಶೇ.64.01, ಪ್ರವರ್ಗ-2ಸಿ ಶೇ.54.75, ಪ್ರವರ್ಗ-3ಎ 67.26, ಪ್ರವರ್ಗ-3ಬಿ 62.58, ಸಾಮಾನ್ಯ ಶೇ.65.88ರಷ್ಟು ಶೇಕಡಾವಾರು ತೇರ್ಗಡೆಯಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಗೆ ಶೇ.59.45ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.7ರಷ್ಟು ಫಲಿತಾಂಶ ಹೆಚ್ಚಾಗಿದೆ ಎಂದ ಅವರು, ನಿರಂತರವಾಗಿ ಶೂನ್ಯ ಫಲಿತಾಂಶ ಬಂದಿರುವ ಕಾಲೇಜುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಖಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಂಟಿ ನಿರ್ದೇಶಕ ವೈ.ಎಚ್.ಇಲ್ಲಾಳ್, ಉಪನಿರ್ದೇಶಕಿ ಪಿ.ಕೆ.ಮೀರಾ, ಸಹಾಯಕ ನಿರ್ದೇಶಕ ಕೆ.ಆರ್.ಪ್ರಸಾದ್ ಉಪಸ್ಥಿತರಿದ್ದರು.

ಜಿಲ್ಲಾವಾರು ಶೇಕಡಾವಾರು ಫಲಿತಾಂಶ
1. ದಕ್ಷಿಣ ಕನ್ನಡ 91.49
2. ಉಡುಪಿ 90.67
3. ಕೊಡಗು 83.94
4. ಉತ್ತರ ಕನ್ನಡ 76.75
5. ಶಿವಮೊಗ್ಗ 75.77
6. ಚಾಮರಾಜನಗರ 75.30
7. ಚಿಕ್ಕಮಗಳೂರು 74.39
8. ಹಾಸನ 73.87
9. ಬೆಂಗಳೂರು ದಕ್ಷಿಣ 73.67
10. ಬಳ್ಳಾರಿ 73.04
11. ಬೆಂಗಳೂರು ಉತ್ತರ 71.68
12. ಬಾಗಲಕೋಟೆ 70.49
13. ಬೆಂಗಳೂರುಗ್ರಾಮಾಂತರ 68.82
14. ಚಿಕ್ಕಬಳ್ಳಾಪುರ 68.61
15. ಹಾವೇರಿ 67.30
16. ಗದಗ 66.83
17. ಮೈಸೂರು 66.77
18. ಕೋಲಾರ 66.51
19. ಮಂಡ್ಯ 65.36
20. ರಾಮನಗರ 64.64
21. ತುಮಕೂರು 64.29
22. ಧಾರವಾಡ 63.67
23. ದಾವಣಗೆರೆ 63.29
24. ವಿಜಯಪುರ 63.10
25. ಕೊಪ್ಪಳ 63.04
26. ರಾಯಚೂರು 56.22
27. ಚಿತ್ರದುರ್ಗ 56.06
28. ಯಾದಗಿರಿ 54.40
29. ಬೆಳಗಾವಿ 54.28
30. ಕಲಬುರಗಿ 53.61
31. ಬೀದರ್ 52.63
32. ಚಿಕ್ಕೋಡಿ 52.20

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ