ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ರ್ಯಾಂಕ್ ವಿಜೇತರ ಪಟ್ಟಿ

ಬೆಂಗಳೂರು, ಏ.30- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿನ ರ್ಯಾಂಕ್ ವಿಜೇತರ ಪಟ್ಟಿ ಈ ಕೆಳಕಂಡಂತಿದೆ.
ಕಲಾ ವಿಭಾಗ:ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ.ಎಸ್ (595) ಪ್ರಥಮ ರ್ಯಾಂಕ್ ಲಭಿಸಿದೆ. ಇದೇ ಕಾಲೇಜಿನ ರಮೇಶ್ (593) ಹಾಗೂ ಗೊರವರ ಕಾವ್ಯಾಂಜಲಿ (588) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ರ್ಯಾಂಕ್ ಗಳಿಸಿದ್ದಾರೆ.

ವಾಣಿಜ್ಯ ವಿಭಾಗ:ಬೆಂಗಳೂರಿನ ಮಲ್ಲೇಶ್ವರದ ವಿದ್ಯಾಮಂದಿರದ ಪಿಯು ಕಾಲೇಜಿನ ವರ್ಷಿಣಿ.ಎಂ.ಭಟ್ (595) ಪ್ರಥಮ ರ್ಯಾಂಕ್ ಗಳಿಸಿದ್ದು, ರಾಜಾಜಿನಗರದ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ.ಎಸ್.ಆರ್ (595) ದ್ವಿತೀಯ ರ್ಯಾಂಕ್, ಮೌಂಟ್ ಕಾರ್ಮೆಲ್ ಕಾಲೇಜಿನ ಪೂರ್ವಿತಾ.ಆರ್, (594) ತೃತೀಯ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ವಿ.ವಿ.ಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು ವಿದ್ಯಾರ್ಥಿನಿ ಕೃತಿ.ಮುಟ್ಟಗಿ (597) ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಹಾಸನದ ಮಾಸ್ಟರ್ಸ್ ಪಿಯು ಕಾಲೇಜು ವಿದ್ಯಾರ್ಥಿ ಮೋಹನ್.ಎಸ್.ಎಲ್ (595) ಎರಡನೆ ರ್ಯಾಂಕ್, ದಕ್ಷಿಣ ಕನ್ನಡದ ಸೂರತ್ಕಲ್‍ನ ಗೋವಿಂದ ದಾಸ ಪಿಯು ಕಾಲೇಜು ವಿದ್ಯಾರ್ಥಿನಿ ಅಂಕಿತಾ.ಪಿ (595) ತೃತೀಯ ರ್ಯಾಂಕ್ ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ