ಕನ್ನೌಜ್(ಉ.ಪ್ರ.), ಏ30-ತನ್ನ ಮೇಲೆ ಗ್ಯಾಂಗ್ರೇಪ್ ಎಸಗಿ ಸಾಮಾಜಿಕ ಜಾಲತಾಣದಲ್ಲಿ ಆ ದೃಶ್ಯವನ್ನು ವೈರಲ್ ಮಾಡಿರುವ ಯುವಕರನ್ನು ನೇಣು ಗಂಭಕ್ಕೇರಿಸದಿದ್ದರೆ ನನ್ನ ಕುಟುಂಬದವರೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತೆ ನೊಂದು ನುಡಿದಿದ್ದಾರೆ. ಈಕೆಗೆ ಕುಟುಂಬದ ಸದಸ್ಯರೂ ಸಹ ಬೆಂಬಲ ನೀಡಿದ್ದು, ಎಲ್ಲರೂ ಸಾವಿಗೆ ಶರಣಾಗುವುದಾಗಿ ಬೆದರಿಕೆ ಹಾಕಿದ್ದಾರೆ.
ಉತ್ತರಪ್ರದೇಶದ ಕನ್ನೌಜ್ ಪ್ರದೇಶದಲ್ಲಿ ಏ.24ರಂದು ಮಹಿಳೆ ಮೇಲೆ ತಾಲಿಬ್ ಮತ್ತು ಸಲ್ಮಾನ್ ಎಂಬುವನ್ನು ಅತ್ಯಾಚಾರ ಎಸಗಿ ಆ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಇದರಿಂದ ನಾವು ಅಪಮಾನಕ್ಕೀಡಾಗಿದ್ದೇವೆ. ಅತ್ಯಾಚಾರಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ. ಅವರಿಬ್ಬರನ್ನು ಗಲ್ಲಿಗೇರಿಸದಿದ್ದರೆ ಕುಟುಂಬದವರೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸಂತ್ರಸ್ತೆ ಮತ್ತು ಆಕೆಯ ಸಹೋದರಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೆÇಲೀಸರು ಭರವಸೆ ನೀಡಿದ್ದಾರೆ.