ಕಾಬೂಲ್, ಏ.30-ಹಿಂಸಾಚಾರ ಮತ್ತು ಉಗ್ರರ ಹಾವಳಿಯಿಂದ ನಲುಗುತ್ತಿರುವ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಮುಂದುವರಿದಿವೆ. ಕಾಬೂಲ್ ಮಧ್ಯ ಭಾಗದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಪತ್ರಕರ್ತ ಸೇರಿದಂತೆ ಎಂಟು ಮಂದಿ ಮೃತಪಟ್ಟು, 14 ಜನ ಗಾಯಗೊಂಡಿದ್ದಾರೆ.
ಎರಡು ಬಾಂಬ್ ಸ್ಫೋಟಗಳಲ್ಲಿ ಓರ್ವ ಪತ್ರಕರ್ತ ಮತ್ತು ಇತರ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಕಾಬೂಲ್ ಅಂಬ್ಯುಲೆನ್ಸ್ ಸೇವೆ ಮುಖ್ಯಸ್ಥ ಮಹಮದ್ ಅಸಿಮ್ ಹೇಳಿದ್ದಾರೆ.
ಗಾಯಗೊಂಡಿರುವ 14 ಜನರನ್ನು ವಜೀರ್ ಅಕ್ಬರ್‍ಖಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಕಾಬೂಲ್ ಪೆÇಲೀಸ್ ಮುಖ್ಯಸ್ಥ ದಾವೂದ್ ಅಮೀನ್ ಹೇಳಿದ್ದಾರೆ.
ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಉಗ್ರರ ಕೃತ್ಯ ಇದೆಂದು ಮತ್ತೊರ್ವ ಉನ್ನತ ಪೆÇಲೀಸ್ ಅಧಿಕಾರಿ ಜಾನ್ ಆಘಾ ತಿಳಿಸಿದ್ದಾರೆ.