ಕಾಬೂಲ್:ಏ-೩೦: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ಉಗ್ರರು ಅಟ್ಟಹಾಸ ಮರೆದಿದ್ದು, ಅವಳಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ಸ್ಫೋಟದಲ್ಲಿ ನಾಲ್ವರು ಪತ್ರಕರ್ತರು ಸೇರಿ 25 ಮಂದಿ ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ ಮೊದಲ ಆತ್ಮಾಹುತಿ ದಾಳಿ ನಡೆದಿದೆ. ಆಗ ಸ್ಥಳಕ್ಕೆ ಪತ್ರಕರ್ತರು ಸೇರಿದಂತೆ ಹಲವರು ದೌಡಾಯಿಸಿದ್ದಾರೆ. ಈ ವೇಳೆ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ.
ಈ ಆತ್ಮಾಹುತಿಕೋರ, ಪತ್ರಕರ್ತರಂತೆ ತಾನೂ ಗುಂಪಿನಲ್ಲಿ ನಿಂತು ಸ್ಫೋಟಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಸ್ಫೋಟಗಳಲ್ಲಿ ಎಎಫ್ಪಿ (Agence France-Presse) ಮುಖ್ಯ ಛಾಯಚಿತ್ರಗಾರ ಶಹಾ ಮರಿಯಾ ಮತ್ತಿತರ ಮೂವರು ಪತ್ರಕರ್ತರು ಸೇರಿದಂತೆ ಒಟ್ಟು 25 ಮಂದಿ ಮೃತಪಟ್ಟಿದ್ದಾರೆ.
ಆತ್ಮಾಹುತಿ ದಾಳಿಯಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಎಂದು ಹೇಳಲಾಗಿದೆ.
ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ಶಾಶ್ದಾರಕ್ ಪ್ರದೇಶದಲ್ಲಿರುವ ಅಫ್ಘಾನ್ನ ಪ್ರಮುಖ ಗುಪ್ತಚರ ಸಂಸ್ಥೆ ರಾಷ್ಟ್ರೀಯಾ ಭದ್ರತಾ ನಿರ್ದೇಶನಾಲಯದ(NATO) ಕಟ್ಟಡ ಬಳಿ ಮೊದಲ ಆತ್ಮಾಹುತಿ ದಾಳಿ ನಡೆದಿದೆ. 20 ನಿಮಿಷದ ನಂತರ ಅದೇ ಪ್ರದೇಶದಲ್ಲಿ ಎರಡನೇ ಬಾಂಬ್ ದಾಳಿ ನಡೆದಿದೆ.
kabul bomb blast,Double suicide attack,25 dead