ಮುಂಬೈ, ಏ.29-ದೇಶದ ವಾಣಿಜ್ಯ ನಗರಿ ಮುಂಬೈನ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯೊಂದರಲ್ಲಿ ಇಲಿಗಳು ರೋಗಿಯ ಕಣ್ಣನ್ನೇ ಭಕ್ಷಿಸಿರುವ ಆತಂಕಕಾರಿ ಘಟನೆ ವರದಿಯಾಗಿದೆ.
ಬಾಳ್ ಠಾಕ್ರೆ ಟ್ರೌಮಾ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಪುತ್ರನ ಬಲಗಣ್ಣನ್ನು ಇಲಿಗಳು ತಿಂದಿವೆ ಎಂದು ರೋಗಿಯ ತಂದೆ ದೂರು ನೀಡಿದ್ಧಾರೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನನ್ನ ಮಗನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ನೀಡಿದ ಬಳಿಕ ಸಾಮಾನ್ಯ ವಾರ್ಡ್‍ಗೆ ಆತನನ್ನು ಸ್ಥಳಾಂತರಿಸಲಾಗಿತ್ತು. ಜನರಲ್ ವಾರ್ಡ್‍ನಲ್ಲಿ ಇಲಿಗಳ ಓಡಾಟವನ್ನು ನಾವು ಗಮನಿಸಿದ್ದೇವು. ಏ.23ರಂದು ಬೆಳಗ್ಗೆ ನನ್ನ ಮಗನ ಕಣ್ಣಿನಲ್ಲಿ ರಕ್ತ ಕಾಣಿಸಿಕೊಂಡಿತು. ಇಲಿಗಳು ನನ್ನ ಮಗನ ಕಣ್ಣನ್ನು ತಿಂದಿರಬಹುದು ಎಂದು ಅವರು ಹೇಳಿದ್ದಾರೆ. ರೋಗಿಯ ಸ್ಥಿತಿ ಗಂಭೀರವಾಗಿದ್ದು, ಈ ಪ್ರಕರಣ ಈಗ ವಿವಾದದ ಸ್ವರೂಪ ಪಡೆಯುತ್ತಿದೆ.
ಆದರೆ ರೋಗಿಯ ತಂದೆ ಆರೋಪವನ್ನು ಆಸ್ಪತ್ರೆಯ ಆಡಳಿತ ಮಂಡಳಿ ನಿರಾಕರಿಸಿದೆ.