ದೇಶದ 3,292 ಎನ್‍ಜಿಒಗಳು ಮತ್ತು ಸಂಸ್ಥೆಗಳು ತನ್ನ ವಾರ್ಷಿಕ ವಿದೇಶಿ ವಂತಿಗೆ, ದೇಣಿಗೆ ಮತ್ತು ಖರ್ಚು ವೆಚ್ಚಗಳ ಬಗ್ಗೆ ಬಹಿರಂಗಗೊಳಿಸಿಲ್ಲ!

ನವದೆಹಲಿ, ಏ.29-ಜೆಎನ್‍ಯು, ಇಗ್ನೌ, ಐಐಟಿ ದೆಹಲಿ ಮತ್ತು ಮದ್ರಾಸ್, ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಸೇರಿದಂತೆ ದೇಶದ 3,292 ಎನ್‍ಜಿಒಗಳು ಮತ್ತು ಸಂಸ್ಥೆಗಳು ತನ್ನ ವಾರ್ಷಿಕ ವಿದೇಶಿ ವಂತಿಗೆ, ದೇಣಿಗೆ ಮತ್ತು ಖರ್ಚು ವೆಚ್ಚಗಳ ಬಗ್ಗೆ ಬಹಿರಂಗಗೊಳಿಸಿಲ್ಲ.
2011-12 ರಿಂದ 2016-17ರ ದಾಖಲೆಗಳನ್ನು ಪರಿಶೀಲಿಸಲಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಹೆಸರಾಂತ ಕಂಪನಿಗಳ ಧರ್ಮಾರ್ಥ ಸಂಸ್ಥೆಗಳೂ ಸೇರಿದಂತೆ ಒಟ್ಟು 3,292 ಎನ್‍ಜಿಗಳು ಕಳೆದ ಹಣಕಾಸು ವರ್ಷ ಅಥವಾ ಅದಕ್ಕೂ ಹಿಂದಿನ ಸಾಲಿಗೆ ಸಂಬಂಧಪಟ್ಟಂತೆ ತಮ್ಮ ವಾರ್ಷಿಕ ವಿದೇಶಿ ಡೋನೆಷನ್‍ಗಳು ಮತ್ತು ಆಯವ್ಯಯಗಳ ಬಗ್ಗೆ ಮಾಹಿತಿ ನೀಡದಿರುವುದು ಕಂಡುಬಂದಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಈ ಸಂಸ್ಥೆಗಳಿಗೆ ಹಲವು ಬಾರಿ ಅವಕಾಶಗಳನ್ನೂ ನೀಡಿದ್ದರೂ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಜಾಲತಾಣದಲ್ಲಿ ಕೆಲವು ಹಣಕಾಸು ಸಾಲಿನಲ್ಲಿ ವಾರ್ಷಿಕ ಆದಾಯ/ಲೆಕ್ಕಪತ್ರಗಳ ವಿವರಗಳನ್ನು ಸಲ್ಲಿಸಿಲ್ಲ. ಇವುಗಳನ್ನು ಸಲ್ಲಿಸುವುದು ಕಡ್ಡಾಯವಾಗಿದ್ದರೂ, ಈ ಸಂಸ್ಥೆಗಳು ತನ್ನ ವಾರ್ಷಿಕ ವಿದೇಶಿ ವಂತಿಗೆ, ದೇಣಿಗೆ ಮತ್ತು ಖರ್ಚು ವೆಚ್ಚಗಳ ಬಗ್ಗೆ ಬಹಿರಂಗಗೊಳಿಸಿಲ್ಲ ಎಂದು ಸಚಿವಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಚಿವಾಲಯದ ಪಟ್ಟಿಯಲ್ಲಿರುವ ಮಾಹಿತಿ ಬಹಿರಂಗಗೊಳಿಸದ ಸಂಸ್ಥೆಗಳಲ್ಲಿ ಪ್ರಮುಖವಾದ ಸಂಸ್ಥೆಗಳೆಂದರೆ: ಇನ್‍ಫೆÇೀಸಿಸ್ ಫೌಂಡೇಷನ್, ಜವಹರ್‍ಲಾಲ್ ನೆಹರು ಯೂನಿವರ್ಸಿಟಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ. ಪಂಜಾಬ್ ವಿಶ್ವವಿದ್ಯಾಲಯ, ಯೂನಿವರ್ಸಿಟಿ ಆಫ್ ರಾಜಸ್ತಾನ್, ಮದ್ರಾಸ್ ಕ್ರೈಸ್ಟ್ ಕಾಲೇಜ್, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ದೆಹಲಿ ಮತ್ತು ಮದ್ರಾಸ್‍ನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಸಂಬಂಧ ಎಲ್ಲ ಸಂಸ್ಥೆಗಳಿಗೆ ಸಚಿವಾಲಯ ನೋಟಿಸ್‍ಗಳನ್ನು ಜಾರಿಗೊಳಿಸಿದ್ದು, ತಕ್ಷಣ ಆನ್‍ಲೈನ್ ಮೂಲಕ ವಾರ್ಷಿಕ ಆದಾಯ ಮತ್ತು ಆಯವ್ಯಯ ವಿವರಗಳನ್ನು ನೀಡುವಂತೆ ಸೂಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ