ಬೆಂಗಳೂರು, ಏ.29-ಕಾಂಗ್ರೆಸ್ ವರಿಷ್ಠರಾದ ಅಧ್ಯಕ್ಷೆ ಸೋನಿಯಾಗಾಂಧಿ, ಅಧ್ಯಕ್ಷ ರಾಹುಲ್ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಟರಾದ ಅಂಬರೀಶ್, ಮೆಗಾಸ್ಟಾರ್ ಚಿರಂಜೀವಿ ಅವರುಗಳ ಜೊತೆ ಇತ್ತೀಚೆಗಷ್ಟೇ ಪಕ್ಷ ಸೇರಿದ ಜಮೀರ್ ಅಹಮ್ಮದ್ಖಾನ್, ಧನಂಜಯ್ಕುಮಾರ್, ಮಾಲಾಶ್ರೀ ಅವರುಗಳು ಕಾಂಗ್ರೆಸ್ ಸ್ಟಾರ್ ಪ್ರಚಾರಕರಾಗಿ ಆಯ್ಕೆಯಾಗಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲು ಸುಮಾರು 40 ಮಂದಿ ಸ್ಟಾರ್ ಕಾಂಪೇನರ್ಗಳ ಪಟ್ಟಿಯನ್ನು ಕೆಪಿಸಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಅದರಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಭಾವಿ ನಾಯಕರ ಹೆಸರುಗಳಿವೆ. ಪ್ರಭಾವಿಗಳ ಜೊತೆಗೆ ಕೆಲವು ಸಾಂದರ್ಭಿಕ ಪ್ರತಿಷ್ಠಿತ ವ್ಯಕ್ತಿಗಳ ಹೆಸರುಗಳೂ ಸೇರಿರುವುದು ವಿವಾದಕ್ಕೆ ಕಾರಣವಾಗಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿ.ಎಂ.ಇಬ್ರಾಹಿಂ 25ನೇ ಸ್ಥಾನದಲ್ಲಿದ್ದರೆ, ಅಂಬರೀಶ್ 26ನೇ ಸ್ಥಾನದಲ್ಲಿದ್ದಾರೆ. ಮುಖ್ಯಮಂತ್ರಿ ಚಂದ್ರು ಮತ್ತು ರಮ್ಯಾ ನಂತರದ ಸ್ಥಾನ ಪಡೆದಿದ್ದಾರೆ.
ಜಮೀರ್ ಅಹಮ್ಮದ್ಖಾನ್ 37ನೆ ಸ್ಥಾನದಲ್ಲಿದ್ದರೆ, ಬಿಜೆಪಿಯಿಂದ ಬಂದ ಧನಂಜಯ್ಕುಮಾರ್ 39ನೇ ಸ್ಥಾನದಲ್ಲಿದ್ದಾರೆ. ಹಿರಿಯ ನಟಿ ಮಾಲಾಶ್ರೀ 40ನೇ ಸ್ಥಾನದಲ್ಲಿದ್ದಾರೆ.
ತಾರಾ ಪ್ರಚಾರಕರ ಪಟ್ಟಿ:
ಕಾಂಗ್ರೆಸ್ ವರಿಷ್ಠರಾದ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನ್ಮೋಹನ್ಸಿಂಗ್, ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಎಐಸಿಸಿ ಪ್ರಧಾನಕಾರ್ಯದರ್ಶಿ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ.ವೇಣು ಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್ಗುಂಡೂರಾವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಮ್ನಬಿ ಆಜಾದ್, ಕೇಂದ್ರ ಮಾಜಿ ಸಚಿವ ಸಚಿನ್ ಪೈಲಟ್, ಮೆಗಾಸ್ಟಾರ್ ಚಿರಂಜೀವಿ, ಬಹುಭಾಷಾ ನಟಿ ಖುಷ್ಬು, ಅಶೋಕ್ ಶಂಕರರಾವ್ ಚೌಹಾಣ್, ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಜ್ಯೋತಿ ರಾವ್ ಸಿಂಧ್ಯಾ, ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾದೇವ್, ಕೇರಳದ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ, ಕೇಂದ್ರ ಮಾಜಿ ಸಚಿವರಾದ ಶಶಿ ತರೂರ್, ವೀರಪ್ಪ ಮೊಯ್ಲಿ, ಎಐಸಿಸಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿ ಹೊಳಿ, ಸಂಸದ ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ ಸಿ.ಎಂ.ಇಬ್ರಾಹಿಂ, ನಟ ಹಾಗೂ ಮಾಜಿ ಸಚಿವ ಎಂ.ಎಚ್.ಅಂಬರೀಶ್, ನಟ ಮುಖ್ಯಮಂತ್ರಿ ಚಂದ್ರು, ನಟಿ ರಮ್ಯಾ, ಸಚಿವರಾದ ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ರೋಷನ್ಬೇಗ್,ಎಚ್.ಸಿ.ಮಹದೇವಪ್ಪ, ಮುಖಂಡರಾದ ಶಬ್ಬಿ ರವಿ, ಶಾಸಕರಾದ ಬಿ.ಝಡ್.ಜಮೀರ್ ಅಹಮ್ಮದ್, ಮಾಜಿ ಸಚಿವೆ ರಾಣಿ ಸತೀಶ್, ಕೇಂದ್ರದ ಮಾಜಿ ಸಚಿವ ಧನಂಜಯ್ಕುಮಾರ್, ಹಿರಿಯ ನಟಿ ಮಾಲಾಶ್ರೀ ಸೇರಿದಂತೆ 40 ಮಂದಿ ಕ್ರಮವಾಗಿ ತಾರಾ ಪ್ರಚಾರಕರಾಗಿದ್ದಾರೆ.