ಜಲ ವಿದ್ಯುತ್ ಯೋಜನೆ ಕಚೇರಿಯಲ್ಲಿ ಬಾಂಬ್ ಸ್ಫೋಟ:

ಕಠ್ಮಂಡು, ಏ.29- ಪ್ರಧಾನಿ ನರೇಂದ್ರಮೋದಿ ಅವರಿಂದ ಉದ್ಘಾಟನೆಗೂ ಮುನ್ನವೇ ನೇಪಾಳದ ಪೂರ್ವಭಾಗದ ಜಲ ವಿದ್ಯುತ್ ಯೋಜನೆ ಕಚೇರಿಯಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಭಾರತದ ನೆರವಿನೊಂದಿಗೆ ಈ ಯೋಜನೆಯನ್ನು ನೇಪಾಳದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.  ರಾಜಧಾನಿ ಕಠ್ಮಂಡುವಿನಿಂದ 500ಕಿ.ಮೀ. ದೂರದ ಟುಮ್ಲಿಂಗ್ಟರ್‍ನಲ್ಲಿ 900 ಮೆ.ವ್ಯಾ. ಸಾಮಥ್ರ್ಯದ ಜಲ ವಿದ್ಯುತ್ ಯೋಜನೆ ಕಚೇರಿಯು ಗೋಡೆ ಬಾಂಬ್ ಸ್ಫೋಟದಿಂದ ಹಾನಿಗೀಡಾಗಿದೆ. ಇದು ಮಾವೋವಾದಿಗಳ ಕೃತ್ಯ ಎಂದು ಶಂಕಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ