ಕಠ್ಮಂಡು, ಏ.29- ಪ್ರಧಾನಿ ನರೇಂದ್ರಮೋದಿ ಅವರಿಂದ ಉದ್ಘಾಟನೆಗೂ ಮುನ್ನವೇ ನೇಪಾಳದ ಪೂರ್ವಭಾಗದ ಜಲ ವಿದ್ಯುತ್ ಯೋಜನೆ ಕಚೇರಿಯಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಭಾರತದ ನೆರವಿನೊಂದಿಗೆ ಈ ಯೋಜನೆಯನ್ನು ನೇಪಾಳದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ರಾಜಧಾನಿ ಕಠ್ಮಂಡುವಿನಿಂದ 500ಕಿ.ಮೀ. ದೂರದ ಟುಮ್ಲಿಂಗ್ಟರ್ನಲ್ಲಿ 900 ಮೆ.ವ್ಯಾ. ಸಾಮಥ್ರ್ಯದ ಜಲ ವಿದ್ಯುತ್ ಯೋಜನೆ ಕಚೇರಿಯು ಗೋಡೆ ಬಾಂಬ್ ಸ್ಫೋಟದಿಂದ ಹಾನಿಗೀಡಾಗಿದೆ. ಇದು ಮಾವೋವಾದಿಗಳ ಕೃತ್ಯ ಎಂದು ಶಂಕಿಸಲಾಗಿದೆ.