ಸೋಲ್(ದಕ್ಷಿಣ ಕೊರಿಯಾ):ಏ-27: ಉತ್ತರ ಕೊರಿಯಾ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಇದೇ ಮೊದಲಬಾರಿಗೆ ತಮ್ಮ ಗಡಿ ದಾಟುವ ಮೂಲಕ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಅವರನ್ನು ಭೇಟಿ ಮಾಡಿದ್ದಾರೆ.
1950–1953ರಲ್ಲಿ ನಡೆದ ಕೊರಿಯಾ ಯುದ್ಧದ ಬಳಿಕ ಉತ್ತರ ಕೊರಿಯಾ ನಾಯಕರೊಬ್ಬರು ದಕ್ಷಿಣ ಕೊರಿಯಾಗೆ ಭೇಟಿ ನೀಡುತ್ತಿರುವುದು ಇದೇ ಮೊದಲು ಹಾಗೂ ಐತಿಹಾಸಿಕವಾಗಿದೆ.
ಕಿಮ್ ಜಾಂಗ್ ಉನ್ ಮತ್ತು ಮೂನ್ ಜೇ–ಇನ್ ಅವರು ಉಭಯ ದೇಶಗಳ ಮಿಲಿಟರಿ ನಿಷೇಧಿತ ಗಡಿ ಪ್ರದೇಶದಲ್ಲಿ ಭೇಟಿಯಾಗಿದ್ದು, ಪನ್ಮುಂಜೊಮ್ನಲ್ಲಿ ಐತಿಹಾಸಿಕ ಅಂತರ ಕೊರಿಯಾ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಮಾತುಕತೆ ನಡೆಸಲಿದ್ದಾರೆ.
ಕೊರಿಯಾ ಶೃಂಗಸಭೆ ನಡೆಯುವ ‘ಪೀಸ್ ಹೌಸ್‘ ಪ್ರವೇಶಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ‘ಒಂದು ಹೊಸ ಇತಿಹಾಸ ಪ್ರಾರಂಭವಾಗುತ್ತದೆ’ ಮತ್ತು ‘ಶಾಂತಿ ಮರು ಸ್ಥಾಪನೆಗೆ ಐತಿಹಾಸಿಕ ಮುನ್ನುಡಿ’ ಎಂದು ಅತಿಥಿ ಪುಸ್ತಕದಲ್ಲಿ ಬರೆದಿದ್ದಾರೆ.
North Korean leader Kim Jong Un,Makes History,meet Moon Jae-in, summit on nuke crisis