
ಬೆಂಗಳೂರು ಏ ೨೭: ಎಂಇಪಿ ಪಕ್ಷದಿಂದ ಬೆಂಗಳೂರಿನ ಬಿಟಿಎಂ ಲೇಔಟ್ ಅಭ್ಯರ್ಥಿಯಾಗಿ , ಗೃಹ ಸಚಿವ ರಾಮಲಿಂಗ ರೆಡ್ಡಿ ವಿರುದ್ಧ ಸ್ಪರ್ಧಿಸಿರುವ ನರ್ಸ್ ಜಯಲಕ್ಷ್ಮೀ ಇಂದು ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ, ಕ್ಷೇತ್ರ ವ್ಯಾಪ್ತಿಯ ಖುಬಾ ಮಸೀದಿ ಬಳಿ ಮತ ಯಾಚನೆ ನಡೆಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ , ಉದ್ಯಾನದಲ್ಲಿ ಮತದಾರ ಭೇಟಿ , ಮನೆಮನೆ ಪ್ರಚಾರ ಸೇರಿದಂತೆ ಭರ್ಜರಿ ಚುನಾವಣಾ ಪ್ರಚಾರ ನಡೆಸಿರುವ ಅವರು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.