ಬೆಂಗಳೂರು,ಏ.26-ರಾಜ್ಯವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಳೆದ 24 ಗಂಟೆಗಳಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡ ಹಾಗೂ ಫ್ಲೈಯಿಂಗ್ ಸ್ಕ್ವಾಡ್ಗಳು ಒಟ್ಟು 30.89 ಲಕ್ಷ ನಗದು ವಶಪಡಿಸಿಕೊಂಡಿವೆ.
ಚುನಾವಣಾ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 40.48 ಕೋಟಿ ರೂ. ಮೌಲ್ಯದ ನಗದನ್ನು ಎಸ್ಎಸ್ಟಿ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪೆÇಲೀಸ್ಪ್ರಾಧಿಕಾರಗಳು ವಶಪಡಿಸಿಕೊಂಡಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಇದುವರೆಗೆ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ಒಟ್ಟು 35.80 ಕೋಟಿ ನಗದು, ಫ್ಲೈಯಿಂಗ್ ಸ್ಕ್ವಾಡ್ಗಳು ಒಟ್ಟು 4.26 ಕೋಟಿ ನಗದನ್ನು ವಶಪಡಿಸಿಕೊಂಡಿವೆ.
ಎರಡು ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ವಶಪಡಿಸಿಕೊಂಡಿದ್ದರೆ, ಫ್ಲೈಯಿಂಗ್ ಸ್ಕ್ವಾಡ್ಗಳು ಗೋಡೆ ಗಡಿಯಾರ, ಸೀರೆ, ಮದ್ಯ, 140 ವಾಹನಗಳನ್ನು ವಶಪಡಿಸಿಕೊಂಡಿವೆ.
ಪೆÇಲೀಸ್ ಪ್ರಾಧಿಕಾರಗಳು ಒಟ್ಟು 17.69 ಲಕ್ಷ ನಗದು, ಸೀರೆ, ಲ್ಯಾಪ್ಟಾಪ್, ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿವೆ.