ಬಾಲಿವುಡ್ ಮಾಜಿ ತಾರೆ ಮಮತಾ ಕುಲಕರ್ಣಿಗೆ ಸೇರಿದ 20 ಕೋಟಿ ರೂ.ಗಳ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು:

ಥಾಣೆ, ಏ.26-ಬಹು ಕೋಟಿ ರೂ.ಗಳ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿ ಮತ್ತು ಬಾಲಿವುಡ್ ಮಾಜಿ ತಾರೆ ಮಮತಾ ಕುಲಕರ್ಣಿಗೆ ಸೇರಿದ 20 ಕೋಟಿ ರೂ.ಗಳ ಮೌಲ್ಯದ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಿದೆ.
ಥಾಣೆ ಪೆÇಲೀಸರು 2016ರಲ್ಲಿ 2,000 ಕೋಟಿ ರೂ.ಗಳ ಡ್ರಗ್ಸ್ ಜಾಲವನ್ನು ಭೇದಿಸಿದ್ದರು. ಈ ಕಳ್ಳಸಾಗಣೆ ಜಾಲದಲ್ಲಿ ಬಾಲಿವುಡ್ ಖ್ಯಾತ ನಟಿಯಾಗಿದ್ದ ಮಮತಾ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಳು. ಕುಖ್ಯಾತ ಡ್ರಗ್ಸ್ ಲಾರ್ಡ್ ವಿಕ್ಕಿ ಗೋಸ್ವಾಮಿ ಜೊತೆ ಶಾಮೀಲಾಗಿ ಈಕೆ ವ್ಯವಸ್ಥಿತ ದಂಧೆ ನಡೆಸಿದ್ದಳು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಮತಾ ಮತ್ತು ವಿಕ್ಕಿ (ಇಬ್ಬರಿಬ್ಬರು ಸತಿ-ಪತಿ ಎನ್ನಲಾಗಿದೆ) ಆಫ್ರಿಕಾದ ಕೀನ್ಯಾಕ್ಕೆ ಪರಾರಿಯಾಗಿದ್ದರು.
ಇವರಿಬ್ಬರನ್ನು ಘೋಷಿತ ಅಪರಾಧಿಗಳೆಂದು ಘೋಷಿಸಲಾಗಿತ್ತು.
ವಿಶೇಷ ಎನ್‍ಡಿಪಿಎಸ್ ಕೋರ್ಟ್ ನ್ಯಾಯಾಧೀಶ ಎಚ್.ಎಂ. ಪಟವರ್ಧನ್ ಮುಂಬೈನ ವಿವಿಧ ಸ್ಥಳಗಳಲ್ಲಿರುವ ಮಮತಾಗೆ ಸೇರಿದ 20 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಫ್ಲಾಟ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ