
ಮೈಸೂರು,ಏ.26- ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೆÇಲೀಸರು ಮೂವರನ್ನು ಬಂಧಿಸಿ 1.74 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಅರವಿಂದನಗರ ನಿವಾಸಿ ಪ್ರಮೋದ್ ಬಾಗರೆ, ಜೆ.ಪಿ.ನಗರ ವಾಸಿ ಹೀರಾ ಹಾಗೂ ಅಶೋಕಪುರಂ ನಿವಾಸಿ ಅಮೀತ್ ಕುಮಾರ್ ಬಂಧಿತರು.
ನಜರಾಬಾದ್ ಠಾಣೆ ವ್ಯಾಪ್ತಿಯ ಜೆಸಿ ನಗರದ 6ನೇ ಕ್ರಾಸ್‍ನಲ್ಲಿರುವ ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಮೂವರನ್ನು ಬಂಧಿಸಿ 1.74 ಲಕ್ಷ ರೂ. ನಗರದು, 1 ಲ್ಯಾಪ್‍ಟಾಪ್, 1 ಎಲ್‍ಇಡಿ ಟಿವಿ, 1 ಕಾರು ಹಾಗೂ 15 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಇನ್ಸ್‍ಪೆಕ್ಟರ್ ಶಿವಸ್ವಾಮಿ, ಶಿವಪ್ರಸಾದ್, ಶಿವಸ್ವಾಮಿ, ಚಿಕ್ಕಣ್ಣ, ರಾಮಸ್ವಾಮಿ, ಗಣೇಶ್, ಶಿವರಾಜ್, ಲಕ್ಷ್ಮೀಕಾಂತ್ ಸೇರಿದಂತೆ ಮತ್ತಿತರರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದರು.