ಬೆಂಗಳೂರು,ಏ.25- ಉಳಿತಾಯ ಹೂಡಿಕೆ ಯೋಜನೆಗಳ ಮೂಲಕ ಯಾರು ಬೇಕಾದರೂ 80 ಸಿ ನಿಯಮ ವ್ಯಾಪ್ತಿಗೆ ತೆರಿಗೆ ವಿನಾಯ್ತಿ ಸೌಲಭ್ಯ ಪಡೆಯಬಹುದು.
ಯಾವ ವಿಧಾನ ಅನುರಿಸಿದರೆ ತೆರಿಗೆ ಉಳಿತಾಯ ಮಾಡಬಹುದು? ಸಂಬಳ ಪಡೆಯುವ ಅಥವಾ ಸಂಬಳ ಪಡೆಯದೇ ಇರುವ ಎಲ್ಲರಿಗೂ ಕಾಡುವಂಥ ಸಾಮಾನ್ಯ ಪ್ರಶ್ನೆ ಇದು.
ನಿವೃತ್ತಿ ನಂತರ ನೆರವಾಗುವಂತಹ ಹಲವು ಯೋಜನೆಗಳನ್ನು ತೆರಿಗೆ ಪಾವತಿಸುವವರಿಗಾಗಿ ಭಾರತದ ತೆರಿಗೆ ನಿಯಮಗಳು ಒದಗಿಸಿವೆ. ಇದರಿಂದ ಹಲವು ತೆರಿಗೆ ವಿನಾಯ್ತಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕ್ಲಿಯರ್ ಟ್ಯಾಕ್ಸ್ ಸಂಸ್ಥಾಪಕ ಅರ್ಚಿತ್ ಗುಪ್ತಾ ತಿಳಿಸಿದ್ದಾರೆ.
ಇಲ್ಲಿ ಮುಖ್ಯವಾಗಿ 80ಸಿ ಅಧಿನಿಯಮದ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಈ ನಿಯಮದಡಿ ಸುಮಾರು 1.5ಲಕ್ಷದವರೆಗೆ ತೆರಿಗೆ ಉಳಿತಾಯ ಮಾಡಬಹುದಾಗಿದೆ. ಈ ಯೋಜನೆಯು ಸ್ವಲ್ಪ ಪ್ರಾಯಸದಾಯಕವಾಗಿದ್ದರೂ, ಹೂಡಿಕೆ ಮಾಡಲು ಉತ್ತಮ ಯೋಜನೆಯಾಗಿದೆ. ಇದು ನಿಮ್ಮ ತೆರಿಗೆ ಉಳಿಸುವ ಕ್ರಮಗಳನ್ನು ಹೆಚ್ಚಿಸುತ್ತದೆ. ಫಂಡ್ ಮ್ಯಾನೇಜರ್ಸ್ ಮತ್ತು ವೃತ್ತಿಪರರು ನಿರ್ವಹಿಸುತ್ತಿರುವ ಈಕ್ವಿಟಿ ರಿಲೇಟೆಡ್ ಪ್ರಾಡಕ್ಟ್ ಗಳಲ್ಲಿ ನೀವು ಮಾಡಿರುವ ಹೂಡಿಕೆ ಪ್ರಮಾಣದ ಹೆಚ್ಚು ಭಾಗ ಇದ್ದರೆ, ನಿಮಗೆ ಸೂಕ್ತವಾದ ಯೋಜನೆ ಇದಾಗಿದೆ ಎಂದು ಅವರು ವಿವರಿಸಿದ್ದಾರೆ.
ಇಎಲ್ಎಸ್ಎಸ್ ನಲ್ಲಿ ಮಾಡುವ ಹೂಡಿಕೆಯು, ಎಸ್ಐಪಿ ಅಥವಾ ಲಂಪ್ಸಮ್ ಪೇಮೆಂಟ್ ಗಳ ಮೂಲಕ ನಡೆಯುತ್ತದೆ. ಶೇ 12-ರಿಂದ 15ರ ವರೆಗಿನ ಹೆಚ್ಚು ಮೊತ್ತದ ರಿಟನ್ರ್ಸ್ ಗಳಿಗೆ ಹೋಲಿಸಿಕೊಂಡರೆ ಟ್ಯಾಕ್ಸ್ ಸೇವಿಂಗ್ ಫಿಕ್ಸ್ ಡ್ ಡಿಪಾಸಿಟ್, ಪಿಪಿಎಫ್, ಎನ್ಎಸ್ ಸಿ ಗೆ ಹೋಲಿಸಿಕೊಂಡರೆ ಇದು ಕೇವಲ ಮೂರು ವರ್ಷಗಳಲ್ಲೇ ಲಾಭ ಕೊಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.