ಬೆಂಗಳೂರು, ಏ.25- ರಾಷ್ಟ್ರದ ಪ್ರತಿಯೊಬ್ಬರಿಗೂ ದೊರಕಿರುವ ಮತದಾನದ ಹಕ್ಕು ಅಂಬೇಡ್ಕರ್ ನೀಡಿದ ಕೊಡುಗೆ ಎಂದು ಕುಲಸಚಿವ ಬಿ.ಕೆ.ರವಿ ಅಭಿಪ್ರಾಯಪಟ್ಟರು .
ಬೆಂಗಳೂರು ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಜಯಂತ್ಯುತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮಾಜಿಕ ಪರಿವರ್ತನೆ ಬದ್ಧತೆಯ ಜಾಗೃತಿ ಹಬ್ಬ-2018ರಲ್ಲಿ ಪಾಲ್ಗೊಂಡು ಮಾತನಾಡಿದರು.
ಐರೋಪ್ಯ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯಲು ಹಲವು ಶತಮಾನಗಳೇ ಬೇಕಾಯಿತು. ಮತದಾನದ ಮಹತ್ವ ಅರಿತಿದ್ದ ಅಂಬೇಡ್ಕರ್ ಭಾರತದ ಪ್ರತಿಯೊಬ್ಬರಿಗೂ ಸ್ವತಂತ್ರದ ಆರಂಭದಲ್ಲೇ ಆ ಹಕ್ಕು ಕಲ್ಪಿಸಿದ್ದರು ಎಂದು ತಿಳಿಸಿದರು.
ಭಾರತ ದೇಶಕ್ಕೂ, ಜಾತಿ ವ್ಯವಸ್ಥೆಗೂ ಅವಿನಾಭಾವ ಸಂಬಂಧವಿದೆ. ಸಾಮಾಜಿಕ ಚಿಂತನೆಗಳುಳ್ಳ ವ್ಯಕ್ತಿಯೋರ್ವ ಜಾತಿ ತ್ಯಜಿಸಿದರೂ, ಜಾತಿ ವ್ಯವಸ್ಥೆ ಇದಕ್ಕೆ ಅವಕಾಶ ನೀಡುವುದೇ ಇಲ್ಲ. ಸಾವಿನಲ್ಲಾದರೂ ಆತನನ್ನು ಜಾತಿಯಲ್ಲಿ ಬಂಧಿಸುವ ಕೆಟ್ಟ ಸಂಪ್ರದಾಯ ಚಾಲ್ತಿಯಲ್ಲಿದೆ ಎಂದು ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಪೆÇ್ರ.ಮೈಲಾರಪ್ಪ ಬೇಸರ ವ್ಯಕ್ತ ಪಡಿಸಿದರು.
ಇಲ್ಲ. ಯುವಜನತೆ ಸಮಾಜಕ್ಕೆ ಮಾರಕವಾದ ಚಿಂತನೆಗಳನ್ನು ತಮ್ಮ ಮಸ್ತಿಷ್ಕದಿಂದ ಹೊರ ತೆಗೆದು ಸಾಮಾಜಿಕ ಬದಲಾವಣೆಗೆ ಮುಂದಾಗಬೇಕು. ವಿಶ್ವ ವಿದ್ಯಾಲಯಗಳಲ್ಲಿ ಇಂತಹ ಸಾಮಾಜಿಕ ಚಿಂತನೆಗಳಿಗೆ ಹೆಚ್ಚಿನ ಪೆÇ್ರೀ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು.
ಎಲ್ಲೆಡೆ ಜಾತಿ ಧರ್ಮದ ಹೆಸರಿನಲ್ಲಿ ಎಲ್ಲೆಡೆ ದ್ವೇಷ, ಅಸಮಾನತೆ ತಾಂಡವಾಡುತ್ತಿವೆ. ಬಸವಣ್ಣ ಬುದ್ಧ ಹಾಗೂ ಅಂಬೇಡ್ಕರ್ ತತ್ವಾದರ್ಶಗಳ ಪಾಲನೆಯೇ ಈ ಸಾಮಾಜಿಕ ಪಿಡುಗಿಗೆ ಮದ್ದು ಎಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥೆ ಪೆÇ್ರೀ ಜಮುನಾ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ದಂತಹ ಪ್ರಕರಣಗಳ ಬಗ್ಗೆ ಯುವಜನತೆ ಚಕಾರ ಎತ್ತುತ್ತಿಲ್ಲ. ಇದೊಂದು ನಕಾರಾತ್ಮಕ ಬೆಳವಣಿಗೆಯಾಗಿದೆ. ಯುವ ಜನತೆಗೆ ಸಮಾಜದ ಓರೆ ಕೋರೆಗಳನ್ನು ಖಂಡಿಸಬೇಕು. ಸರಿ ದಾರಿಗೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಗಂಗಾರ್ಧ ,ಐ.ಎಸï.ಶಿವಕುಮಾರ್, ರಾಜ್ಯ ಶಾಸ್ತ್ರ ವಿಭಾಗದ ಪೆÇ್ರೀ ಮತ್ತಿತರರಿದ್ದರು.