ನಗರ ಠಾಣೆಯಲ್ಲಿ ಪೆÇಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು , ಪೆÇೀಷಕರು ಲಾಕಪ್‍ಡೆಟ್ ಎಂದು ಆರೋಪಿಸಿದ್ದಾರೆ:

ತುಮಕೂರು,ಏ.25-ನಗರ ಠಾಣೆಯಲ್ಲಿ ಪೆÇಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು , ಪೆÇೀಷಕರು ಲಾಕಪ್‍ಡೆಟ್ ಎಂದು ಆರೋಪಿಸಿದ್ದಾರೆ.
ಬೆಂಗಳೂರು ಮೂಲದ ಅಲ್ತಾಫ್ ಪಾಷಾ(32) ಎಂಬಾತನನ್ನು ವಿಚಾರಣೆಗೆಂದು ನಗರ ಠಾಣೆಗೆ ಕರೆ ತಂದಿದ್ದಾಗ ಮೃತಪಟ್ಟಿದ್ದಾರೆ.
ಕೆಂಗೇರಿ ಬಳಿಯ ದೊಡ್ಡ ಬಸ್ತಿಯಲ್ಲಿ ಈ ಹಿಂದೆ ವಾಸವಾಗಿದ್ದ ಅಲ್ತಾಫ್ ಪಾಷ ಮದುವೆ ಮಾಡಿಕೊಂಡು ಗೋವಿಂದನಗರದಲ್ಲಿ ವಾಸವಾಗಿದ್ದರು.
ತುಮಕೂರು ತಾಲ್ಲೂಕಿನ ಹೊನ್ನುಡ್ಕೆ ಬಳಿಯ ಚೋಳಂಬಳಿ ಗ್ರಾಮದ ಉಸ್ಮಾನ್ ಎಂಬಾತನನ್ನು ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.
ಈತನ ಹೇಳಿಕೆ ಮೇರೆಗೆ ಹೊಸಕೋಟೆಯ ಮತ್ತೊಬ್ಬನನ್ನು ಕರೆತಂದು ವಿಚಾರಣೆ ನಡೆಸಿದಾಗ ಈತ ಅಲ್ತಾಫ್‍ನ ಹೆಸರು ಹೇಳಿದ್ದಾರೆ.
ಅಲ್ತಾಫ್ ಪಾಷಾನನನು ಬಲೆಗೆ ಬೀಳಿಸಿಕೊಳ್ಳುವ ಸಲುವಾಗಿ ಬೈಕ್ ಬೇಕೆಂದು ಹೇಳಿದಾಗ ಆತ ಚೋಳಂಬಳ್ಳಿಗೆ ಬರಲು ಸೂಚಿಸಿದ್ದಾನೆ.
ಪೆÇಲೀಸರು ಐವರು ಸಿಬ್ಬಂದಿಯೊಂದಿಗೆ ಚೋಳಂಬಳ್ಳಿಗೆ ರಾತ್ರಿ ತೆರಳಿದ್ದಾರೆ. ನಂತ ಅಲ್ತಾಫ್ ತನ್ನ ಸ್ನೇಹಿತನೊಂದಿಗೆ ಕುಳಿತಿದ್ದಾಗ ಪೆÇಲೀಸರು ಸುತ್ತುವರೆದಿದ್ದಾರೆ.
ತಕ್ಷಣ ಗಮನಿಸಿದ ಅಲ್ತಾಫ್ ತನ್ನ ಬಳಿಯಿಂದ ಪಿಸ್ತೂಲಿನಿಂದ ಗುಂಡು ಹಾರಿಸಲು ಯತ್ನಿಸಿದಾಗ , ಸ್ಥಳೀಯ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಅಲ್ತಾಫ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಪೆÇಲೀಸರು ತಿಳಿಸಿದ್ದಾರೆ.
ತಕ್ಷಣ ಅಲ್ತಾಫ್‍ನನ್ನು ನಗರ ಠಾಣೆಗೆ ರಾತ್ರಿ 11 ಗಂಟೆ ಸಮಯಕ್ಕೆ ಕರೆತಂದಿದ್ದಾರೆ.
ಈ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಲ್ತಾಫ್ ಎದೆ ನೋವಿನಿಂದ ಒದ್ದಾಡುತ್ತಿದ್ದಾಗ ತಕ್ಷಣ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಕರ್ತವ್ಯದಲ್ಲಿದ್ದ ವೈದ್ಯ ಡಾ.ಭಾನುಪ್ರಕಾಸ್ ಅವರು ಅಲ್ತಾಫ್‍ನನ್ನು ಪರೀಕ್ಷಿಸಿದಾಗ ಈತ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ವಿಷಯ ತಿಳಿದ ಪೆÇೀಷಕರು ಠಾಣೆ ಬಳಿ ದೌಡಾಯಿಸಿ ತಮ್ಮ ಮಗನ ಸಾವಿಗೆ ಪೆÇಲೀಸರೇ ಕಾರಣ.ಇದು ಸಹಜ ಸಾವಲ್ಲ. ಲಾಕಪ್ ಡೆತ್ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿ ತಿಳಿದ ಜಿಲ್ಲಾಎಸ್ಪಿ ದಿವ್ಯಾಗೋಪಿನಾಥ್, ಡಿವೈಎಸ್‍ಪಿ ನಾಗರಾಜ, ವೃತ್ತ ನಿರೀಕ್ಷಕ ಚಂದ್ರಶೇಖರ್ ನಗರ ಠಾಣೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ