ಬೆಂಗಳೂರು, ಏ.24-ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಣೆಯಲ್ಲಿ ಹಲವು ವೃಂದದ ನೌಕರರಿಗೆ ವ್ಯತ್ಯಾಸ ಹಾಗೂ ನ್ಯೂನ್ಯತೆಗಳು ಉಂಟಾಗಿರುವುದು ಕಂಡು ಬಂದಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ತಿಳಿಸಿದೆ.
ರಾಜ್ಯದ ಆರನೇ ವೇತನ ಆಯೋಗದ ಮುಂದೆ ಸಂಘವು ಸಮರ್ಥವಾದ ಅಂಕಿಅಂಶಗಳನ್ನು ಮಾಹಿತಿ ಒದಗಿಸಿದ್ದರೂ ವೇತನ ಪರಿಷ್ಕರಣೆಯಲ್ಲಿ ಕೆಲವು ನ್ಯೂನ್ಯತೆಗಳು ಕಂಡು ಬಂದಿವೆ. ಇದರಿಂದ ಹಿರಿಯ ನೌಕರರಿಗಿಂತ ಕಿರಿಯ ನೌಕರರ ವೇತನ ಶ್ರೇಣಿ ಸರಿಸಮನಾಗಿರುವುದು ಕಂಡು ಬಂದಿದೆ. ಇಂತಹ ನ್ಯೂನ್ಯತೆಗಳೂ ಸೇರಿದಂತೆ ಪರಿಷ್ಕøತ ವೇತನ ಶ್ರೇಣಿಯಲ್ಲಿ ಉಂಟಾಗಿರುವ ನ್ಯೂನ್ಯತೆಗಳನ್ನು ಸರಿಪಡಿಸಲು ವೇತನ ಆಯೋಗಕ್ಕೆ ತುರ್ತಾಗಿ ಮನವಿ ಸಲ್ಲಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಕೆ.ರಾಮು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ತಮ್ಮ ಅಭಿಪ್ರಾಯ, ಸಲಹೆ, ಸೂಚನೆಗಳು ಸೇರಿದಂತೆ ಅಗತ್ಯ ಮಾಹಿತಿಗಳನ್ನು ತುರ್ತಾಗಿ ಕೇಂದ್ರ ಸಂಘಕ್ಕೆ ಸಲ್ಲಿಸಲು ಮನವಿ ಮಾಡಿದ್ದಾರೆ.
ವೇತನ ಆಯೋಗದ ತನ್ನ ಮೊದಲ ವರದಿಯನ್ನು ಸಲ್ಲಿಸಿದ್ದು, ಸರ್ಕಾರವು ಆಯೋಗದ ಶಿಫಾರಸ್ಸಿನ ಅನ್ವಯ ಪರಿಷ್ಕøತ ವೇತನ ಶ್ರೇಣಿಗಳ ಕೋಷ್ಟಕವನ್ನು ಪ್ರಕಟಿಸಿದೆ. ಆದರೆ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ಹಲವು ವೃಂದದ ನೌಕರರಿಗೆ ವೇತನ ಶ್ರೇಣಿಗಳಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.