ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರ ನೇಮಕ

ಬೆಂಗಳೂರು, ಏ.24- ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ರಾಜರಾಜೇಶ್ವರಿ ನಗರ -ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರ-ಅನುಘೋಷ್, ಶಿವಾಜಿನಗರ, ಪುಲಕೇಶಿನಗರ-ಅನಿಲ್, ಶಾಂತಿನಗರ, ಮಹದೇವಪುರ-ಮೋನಿಮಾಲಾಪುಕಾನ್, ಗಾಂಧಿನಗರ, ಚಿಕ್ಕಪೇಟೆ- ಇಂದ್ರಮಲೋ, ಕೆ.ಆರ್.ಪುರ, ಸಿ.ವಿ.ರಾಮನ್‍ನಗರ- ಜೈಪ್ರಕಾಶ್, ರಾಜಾಜಿನಗರ, ಮಲ್ಲೇಶ್ವರಂ-ವಿ.ಲಲಿತಾಲಕ್ಷ್ಮಿ, ಸರ್ವಜ್ಞನಗರ, ಹೆಬ್ಬಾಳ-ಡಾ.ಹರಿಓಂ, ಚಾಮರಾಜಪೇಟೆ, ಬಸವನಗುಡಿ-ಕುಮಾರ್‍ರವಿ ಕಾಂತ್‍ಸಿಂಗ್, ಗೋವಿಂದರಾಜನಗರ, ವಿಜಯನಗರ-ಧನಂಜಯ್‍ಸಿಂಗ್ ಬಂಡೂರಿಯ, ಪದ್ಮನಾಭನಗರ, ಜಯನಗರ-ಮಂಜಿತ್‍ಸಿಂಗ್, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ- ಕೆ.ಶ್ರೀನಿವಾಸುಲು, ಯಶವಂತಪುರ, ದಾಸರಹಳ್ಳಿ-ಅಶೋಕ್ ಸಂಗ್ವಾನ್, ಯಲಹಂಕ, ಬ್ಯಾಟರಾಯನಪುರ-ವಿಜಯ್ ಸಿಂಘಾಲ್, ಬೆಂಗಳೂರು ದಕ್ಷಿಣ, ಆನೇಕಲ್-ನವಾನ್ ಸೋನ ಇವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರತಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬ ಹಿರಿಯ ಐಎಎಸ್ ಅಧಿಕಾರಿಗಳನ್ನೂ ಚುನಾವಣಾಧಿಕಾರಿಗಳು ನೇಮಕ ಮಾಡಿದ್ದಾರೆ.

ಅದೇ ರೀತಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಐಆರ್‍ಎಸ್ ಅಧಿಕಾರಿಯನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

28 ವಿಧಾನಸಭಾ ಕ್ಷೇತ್ರಗಳಿಗೆ ಮೂವರು ಐಪಿಎಸ್ ಅಧಿಕಾರಿಗಳಾದ ಅಕಿತೊಸೀಮಾ, ಎನ್.ವೇಣುಗೋಪಾಲ್ ಮತ್ತು ನಿರ್ಲಿಪ್ತ್‍ರಾಜ್ ಅವರುಗಳನ್ನು ಪೆÇಲೀಸ್ ವೀಕ್ಷಕರುಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕೆಂಬ ಉದ್ದೇಶದಿಂದ ದಕ್ಷ ಅಧಿಕಾರಿಗಳನ್ನು ವೀಕ್ಷಕರುಗಳನ್ನಾಗಿ ನೇಮಿಸಲಾಗಿದೆ. ಎಲ್ಲ ಅಧಿಕಾರಿಗಳಿಗೂ ಪ್ರತ್ಯೇಕ ಕಚೇರಿ ಮತ್ತು ದೂರವಾಣಿ ವ್ಯವಸ್ಥೆ ಮಾಡಲಾಗಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ