ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ನಾಲ್ವರು ಯುವಕರನ್ನು ಜೆ.ಬಿ.ನಗರ ಠಾಣೆ ಪೆÇಲೀಸರು ವಶಕ್ಕೆ

ಬೆಂಗಳೂರು, ಏ.23-ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ನಾಲ್ವರು ಯುವಕರನ್ನು ಜೆ.ಬಿ.ನಗರ ಠಾಣೆ ಪೆÇಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆಂದು ಹಳೇ ಏರ್‍ಪೆÇೀರ್ಟ್ ರಸ್ತೆಯ ಹೊಟೇಲ್‍ವೊಂದರ ಬಳಿ ಯುವತಿ ಹೋಗುತ್ತಿದ್ದಾಗ ನಾಲ್ವರು ಯುವಕರ ಗುಂಪೆÇಂದು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಆಕೆಯ ಟೀ ಶರ್ಟ್ ಎಳೆದು ದೌರ್ಜನ್ಯವೆಸಗಿದ್ದರು.
ಈಕೆಯ ಸ್ನೇಹಿತರು ಈ ಬಗ್ಗೆ ಫೇಸ್‍ಬುಕ್‍ನಲ್ಲಿ ತನ್ನ ಗೆಳತಿಗೆ ಕಿರುಕುಳ ನೀಡಲಾಗಿದೆ ಎಂದು ಪೆÇೀಸ್ಟ್ ಹಾಕಿದ್ದರು. ಫೇಸ್‍ಬುಕ್ ಸ್ಟೇಟಸ್ ಆಧಾರದ ಮೇಲೆ ದೂರು ದಾಖಲಿಸಿದ್ದ ಜೆ.ಬಿ.ನಗರ ಪೆÇಲೀಸರು ತನಿಖೆ ನಡೆಸಿ ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ