ಬೆಂಗಳೂರು, ಏ.23-ಪತಿಯೊಂದಿಗೆ ಹೋಗುತ್ತಿದ್ದ ಮಹಿಳೆಯನ್ನು ಬೈಕ್ನಲ್ಲಿ ಹಿಂಬಾಲಿಸಿದ ಸರಗಳ್ಳ 40 ಗ್ರಾಂ ಸರ ಎಗರಿಸಿದರೆ, ಮತ್ತೊಂದು ಪ್ರಕರಣದಲ್ಲಿ ಮನೆ ಬಳಿ ಮಹಿಳೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಎಗರಿಸಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವೆಂಕಟದಾಸಪ್ಪ ಎಂಬುವರು ಪತ್ನಿಯೊಂದಿಗೆ ಹೊರಗೆ ಹೋಗಿ ರಾತ್ರಿ 11.15ರಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು.
ಇನ್ನೇನು ಮನೆ ತಲುಪಬೇಕೆನ್ನುವಷ್ಟರಲ್ಲಿ ವೆಂಕಟದಾಸಪ್ಪ ದಂಪತಿಯ ಹಿಂಬಾಲಿಸಿ ಬೈಕ್ನಲ್ಲಿ ಬಂದ ಸರಗಳ್ಳರು ಚಾಕು ತೋರಿಸಿ ಬೆದರಿಸಿ ಮಹಿಳೆಯ ಕೊರಳಲ್ಲಿದ್ದ 40 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇದೇ ವ್ಯಾಪ್ತಿಯ ಸಂಧ್ಯಾ ಎಂಬುವರು ಮನೆ ಮುಂದೆ ರಾತ್ರಿ 10.30ರಲ್ಲಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ ಬೈಕ್ನಲ್ಲಿ ಬಂದ ದರೋಡೆಕೋರರು ಇವರ ಕೈಯಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೆÇಲೀಸರು ದಾಖಲಿಸಿಕೊಂಡಿದ್ದಾರೆ.