ನವದೆಹಲಿ, ಏ.22-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ದರ ಇಂದು ಲೀಟರ್ಗೆ 74.40 ರೂ.ಗಳಿಗೆ ಏರಿದ್ದರೆ, ಡಿಸೇಲ್ ಪ್ರತಿ ಲೀಟರ್ಗೆ 65.65 ರೂ.ಗಳಷ್ಟು ಹೆಚ್ಚಾಗಿದೆ.
ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ತಪ್ಪಿಸಲು ಅಬಕಾರಿ ಸುಂಕವನ್ನು ಕಡಿತಗೊಳಿಸುವ ಅನಿವಾರ್ಯತೆ ಎದುರಾಗಿದೆ.
ರಾಜ್ಯ ಒಡೆತನದ ತೈಲ ಸಂಸ್ಥೆಗಳು, ಕಳೆದ ವರ್ಷ ಜೂನ್ನಿಂದಲೂ ವಾಹನಗಳ ಇಂಧನ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತಲೇ ಇದೆ. ಇಂದು ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 19 ಪೈಸೆಗಳಷ್ಟು ಹೆಚ್ಚಾಗಿದೆ
ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿ ಏರಿಳಿತಗಳೂ ಕೂಡ ಇದಕ್ಕೆ ಕಾರಣ ಎಂದು ದರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.