ಅಮೃತಸರದಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನದ ಮೇಲೆ ಹಠಾತ್ ಪ್ರಬಲ ಗಾಳಿ:

ನವದೆಹಲಿ, ಏ.22-ಅಮೃತಸರದಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನದ ಮೇಲೆ ಹಠಾತ್ ಪ್ರಬಲ ಗಾಳಿ ಪ್ರವಹಿಸಿ ಮೂವರು ಪ್ರಯಾಣಿಕರು ಗಾಯಗೊಂಡಿದ್ದು, ಕಿಟಕಿಗಳು ಮುರಿದು, ಆಸನಗಳಲ್ಲೂ ಬಿರುಕು ಕಾಣಿಸಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಿಂದ ವಿಮಾನದೊಳಗಿದ್ದ ಪ್ರಯಾಣಿಕರು ತುರ್ತು ಆಮ್ಲಜನಕ ಮುಖವಾಡಗಳನ್ನು ಬಳಸಬೇಕಾಯಿತು.
ಗಗನದಲ್ಲಿ ಬೋಯಿಂಗ್ 787 ಡ್ರೀಮ್‍ಲೈನರ್ (ವಿಟಾನಿ) ವಿಮಾನವು ಅಂತರಿಕ್ಷದಲ್ಲಿ 10 ರಿಂದ 15 ನಿಮಿಷಗಳ ಕಾಲ ದಿಢೀರ್ ಮತ್ತು ಅನಿರೀಕ್ಷಿತ ಪ್ರಬಲ ಗಾಳಿಯ ನಡುವೆ ವಿಮಾನ ಚಲಿಸಿದಾಗ ಈ ಘಟನೆ ಸಂಭವಿಸಿತು. ಗಾಳಿ ಮತ್ತಷ್ಟು ಪ್ರಬಲವಾಗಿದ್ದರೆ ವಿಮಾನಕ್ಕೆ ಭಾರೀ ಅಪಾಯವಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ.
ಈ ಘಟನೆಯಿಂದ ಪ್ರಯಾಣಿಕರು ಕೆಲಕಾಲ ಭಯಭೀತಗೊಂಡರು. ಏರ್ ಇಂಡಿಯಾ ಮತ್ತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ