ರಂಗೇರಿದ ಚುನಾವಣ ಕಣ: ಜೆಡಿಎಸ್ ಅಭ್ಯರ್ಥಿ ಕೆ.ಗೋಪಾಲಯ್ಯನವರ ಪರ ಮಾಜಿ ಉಪಮೇಯರ್ ಹಾಗೂ ಪತ್ನಿ ಹೇಮಲತಾ ಗೋಪಾಲಯ್ಯ ಮತಯಾಚನೆ

ಬೆಂಗಳೂರು,ಏ.22- ಚುನಾವಣೆಗೆ ದಿನಗಣನೆ ಪ್ರಾರಂಭವಾಗುತ್ತಿದ್ದಂತೆ ಚುನಾವಣಾ ಕಣ ರಂಗೇರತೊಡಗಿದೆ.

ಮಹಾಲಕ್ಷ್ಮಿಪುರಂ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಗೋಪಾಲಯ್ಯನವರ ಪರ ಮತಯಾಚಿಸಲು ಮಾಜಿ ಉಪಮೇಯರ್ ಹಾಗೂ ಪತ್ನಿ ಹೇಮಲತಾ ಗೋಪಾಲಯ್ಯ ಅವರು ಕಮಲಾನಗರದಲ್ಲಿ ಮನೆ, ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದರು.
ಈ ಸಂದರ್ಭದಲ್ಲಿ ಶಾಸಕ ಗೋಪಾಲಯ್ಯ ಅವರು ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ತಿಳಿಸಿದರು.

ಕ್ಷೇತ್ರದ ಎಲ್ಲ ವಾರ್ಡ್‍ಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಎಲ್ಲರಿಗೂ ನೀರು ಸಿಗುವಂತೆ ಮಾಡಿದ್ದಾರೆ. ಉದ್ಯಾನವನಗಳನ್ನು ನಿರ್ಮಿಸಿ ಹಿರಿಯ ನಾಗರಿಕರಿಗೆ ವಾಕಿಂಗ್ ಪಾಥ್ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ. ರಸ್ತೆಗಳನ್ನು ಅಭಿವೃದ್ದಿಪಡಿಸಿದ್ದಾರೆ ಎಂದರು.
ಬಡವರಿಗೆ ಮನೆಗಳ ಹಕ್ಕುಪತ್ರ ಕೂಡಿಸಿದ್ದು, ಪ್ರತಿ ತಿಂಗಳು ಕೊನೆ ವಾರ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ ಉಚಿತ ಕನ್ನಡಕ ವಿತರಿಸಲಾಗಿದೆ. ವಿಕಲಚೇತನರಿಗೆ ನಾಲ್ಕು ಚಕ್ರದ ವಾಹನ ವಿತರಿಸಿರುವುದು ಹಾಗೂ ವಯೋವೃದ್ಧರಿಗೆ ಮಾಶಾಸನ, ಅವರ ಆರೋಗ್ಯದ ಬಗ್ಗೆ ಕಾಳಜಿ ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು.

ಮತಯಾಚನೆ ಮಾಡುವಾಗ ಜನರು ಕೂಡ ನಮ್ಮ ಕ್ಷೇತ್ರದ ಅಭಿವೃದ್ದಿ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಾರಿ ಗೆಲ್ಲವೂ ನಮ್ಮದೇ ಕ್ಷೇತ್ರದಲ್ಲಿ ಜನರು ಕೂಡ ಜೆಡಿಎಸ್ ಪಕ್ಷದ ಮೇಲೆ ಒಲವು ತೋರಿದ್ದಾರೆ ಎಂದರು.
ಮಾಜಿ ಕಾಪೆರ್Çೀರೇಟರ್ ಪದ್ಮಾವತಿ, ಶ್ರೀನಿವಾಸ, ಪಾಲಿಕೆ ಸದಸ್ಯೆ ಗಂಗಮ್ಮ ರಾಜಣ್ಣ , ಶ್ರೀನಿವಾಸ, ಜೆಡಿಎಸ್ ಮುಖಂಡರಾದ ಕಿರಣ್‍ಕುಮಾರ್ ರವಿಕುಮಾರ್, ಕಾಂತರಾಜು ಮುಂತಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ