ನೋಂದಾಯಿತ ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದಿಂದ ಚಿಹ್ನೆಗಳ ಹಂಚಿಕೆ

ಬೆಂಗಳೂರು, ಏ.21-ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನೋಂದಾಯಿತ ವಿವಿಧ ರಾಜಕೀಯ ಪಕ್ಷಗಳಿಗೆ ಭಾರತೀಯ ಚುನಾವಣಾ ಆಯೋಗ ಚಿಹ್ನೆಗಳನ್ನು ಹಂಚಿಕೆ ಮಾಡಿದೆ.

ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಸಿಪಿಐ, ಸಿಪಿಎಂ, ಬಿಎಸ್‍ಪಿ, ಜೆಡಿಯು, ಜೆಡಿಎಸ್ ಮೊದಲಾದ ಪಕ್ಷಗಳಲ್ಲದೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಇತರೆ 32 ರಾಜಕೀಯ ಪಕ್ಷಗಳು ಪ್ರತ್ಯೇಕ ಚಿಹ್ನೆಗಳನ್ನು ಪಡೆದುಕೊಂಡಿವೆ. ಜನಸಾಮಾನ್ಯರ ಪಕ್ಷಕ್ಕೆ ರೈತ ಚಾಲಿತ ಟ್ರ್ಯಾಕ್ಟರ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಆಟೋರಿಕ್ಷಾ, ಭಾರತೀಯ ಜನತಾ ಪೀಪಲ್ಸ್ ಪಾರ್ಟಿಗೆ ತೆಂಗಿನ ತೋಟ, ಇಂಡಿಯನ್ ಬುಸಿನೆಸ್ ಪಾರ್ಟಿಗೆ ಬ್ಯಾಟ್, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್ ಪಕ್ಷಕ್ಕೆ ಮೋಂಬತ್ತಿ, ಸಾಮಾನ್ಯ ಜನತಾ ಪಕ್ಷಕ್ಕೆ ಏಳು ಕಿರಣಗಳ ಜೊತೆ ಪೆನ್ನಿನ ಮುಳ್ಳು, ಜನಹಿತ ಪಕ್ಷಕ್ಕೆ ಲಾರಿ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷಕ್ಕೆ ವಿಷಲ್, ಜನತಾ ಕಾಂಗ್ರೆಸ್ ಪಕ್ಷಕ್ಕೆ ಟಾರ್ಚ್, ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಗೆ ಗ್ಯಾಸ್ ಸಿಲಿಂಡರ್ ಚಿಹ್ನೆ ನೀಡಲಾಗಿದೆ.

ರಾಷ್ಟ್ರೀಯ ವಿಕಾಸ ಮೋರ್ಚಾ ಪಕ್ಷಕ್ಕೆ ಹಾರ್ಮೋನಿಯಂ, ರಾಣಿ ಚೆನ್ನಮ್ಮ ಪಕ್ಷಕ್ಕೆ ಉಂಗುರ, ಭಾರತೀಯ ಬಹುಜನ ಕ್ರಾಂತಿದಳಕ್ಕೆ ಟಿವಿ, ಸರ್ವ ಜನತಾ ಪಾರ್ಟಿಗೆ ಬ್ಯಾಟ್ಸ್‍ಮನ್, ಭಾರತೀಯ ಟ್ರೈಬಲ್ ಪಾರ್ಟಿಗೆ ಇಸ್ತ್ರೀಪೆಟ್ಟಿಗೆ, ಭಾರತೀಯ ಜನಶಕ್ತಿ ಕಾಂಗ್ರೆಸ್‍ಗೆ ಬೆಂಡೇಕಾಯಿ, ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷಕ್ಕೆ ಧಾನ್ಯ ತೂರುತ್ತಿರುವ ರೈತನ ಚಿತ್ರ, ಅಂಬೇಡ್ಕರ್ ಸಮಾಜ ಪಾರ್ಟಿಗೆ ಗಾಜಿನ ಗ್ಲಾಸ್, ಪ್ರಜಾರೈತ ರಾಜ್ಯ ಪಕ್ಷಕ್ಕೆ ಲೆಟರ್ ಬಾಕ್ಸ್, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಹೊಲಿಗೆ ಯಂತ್ರ, ಲೋಕ ಆವಾಜ್ ದಳಕ್ಕೆ ಕಪ್ಪು ಹಲಗೆ, ಜೈ ಭಾರತ್ ಜನಸೇನಾಕ್ಕೆ ಗ್ಯಾಸ್‍ಸ್ಟೌವ್ ಚಿಹ್ನೆಗಳನ್ನು ಆಯೋಗ ನೀಡಿದೆ.

ಅಖಿಲ ಭಾರತ ಜನರಕ್ಷ ಪಕ್ಷಕ್ಕೆ ದ್ರಾಕ್ಷಿ, ಸಂಪೂರ್ಣ ಭಾರತ್ ಕ್ರಾಂತಿ ಪಕ್ಷಕ್ಕೆ ಬೆಂಕಿಪೆÇಟ್ಟಣ, ರಾಷ್ಟ್ರೀಯ ಮಾನವ ವಿಕಾಸ ಪಕ್ಷಕ್ಕೆ ಪೆನ್ಸಿಲ್ ಬಾಕ್ಸ್, ರಾಷ್ಟ್ರೀಯ ಅಭಿವೃದ್ಧಿ ಪಕ್ಷಕ್ಕೆ ಕೋಟು, ಪೀಪಲ್ಸ್ ಆ್ಯಕ್ಷನ್ ಪಾರ್ಟಿಗೆ ಕಪ್ ಅಂಡ್ ಸಾಸರ್, ಕನ್ನಡ ಪಕ್ಷಕ್ಕೆ ರೋಡ್ ರೋಲರ್, ಪ್ರಜಾ ಪರಿವರ್ತನಾ ಪಕ್ಷಕ್ಕೆ ಅನಾನಸ್, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕರ ಪಕ್ಷ ಟ್ರಿಲ್ಲರ್ ಹಾಗೂ ಕರುನಾಡ ಪಕ್ಷಕ್ಕೆ ಕಲ್ಲಂಗಡಿ ಹಣ್ಣಿನ ಚಿಹ್ನೆಯನ್ನು ಹಂಚಿಕೆ ಮಾಡಿದೆ.
ಇತರೆ ಪ್ರಮುಖ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳಂತೆಯೇ ಈ ಪಕ್ಷಗಳ ಅಭ್ಯರ್ಥಿಗಳ ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಹಾಗೂ ತಮ್ಮ ತಮ್ಮ ಪಕ್ಷದ ಚಿಹ್ನೆ ಪಡೆಯಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ