ಯುವ ವಕೀಲ ಬಳ್ಳೇಕೆರೆ ಬಿ.ಎನ್.ಲೋಕೇಶ್ ಅವರು ಇಂದು ಚುನಾವಣಾಧಿಕಾರಿ ಪಿ.ಶಿವಣ್ಣ ಅವರಿಗೆ ನಾಮಪತ್ರ :

ಕೆ.ಆರ್.ಪೇಟೆ,ಏ.20-ಇದೇ ಮೇ 12ರಂದು ನಡೆಯುವ ರಾಜ್ಯ ವಿಧಾನಸಭೆಯ ಕೃಷ್ಣರಾಜಪೇಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ನಾತಕೋತ್ತರ ಪದವೀಧರ, ಯುವ ವಕೀಲ ಬಳ್ಳೇಕೆರೆ ಬಿ.ಎನ್.ಲೋಕೇಶ್ ಅವರು ಇಂದು ಚುನಾವಣಾಧಿಕಾರಿ ಪಿ.ಶಿವಣ್ಣ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಲೋಕೇಶ್ ಅವರು ಸುಮಾರು ನಾಲ್ಕು ಸಾವಿರ ಮತಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದರು. ಎಂ.ಎಸ್.ಸಿ. ಎಲ್.ಎಲ್.ಬಿ. ಪದವೀಧರರಾದ ಬಿ.ಎನ್.ಲೋಕೇಶ್ ಅವರು ಬೆಂಗಳೂರಿನಲ್ಲಿ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜೊತೆಗೆ ತಾಲೂಕಿನಲ್ಲಿ ಸಮಾಜ ಸೇವೆ ಮಾಡುವ ಹಂಬಲವನ್ನು ಹೊಂದಿದ್ದಾರೆ. ಸಮಾಜದ ಕೆಲಸ ಮಾಡಲು ರಾಜಕೀಯ ಶಕ್ತಿ ಅಗತ್ಯವಾಗಿದೆ ಇದನ್ನು ಪಡೆದು ತಾಲೂಕಿನ ಸಮಗ್ರ ಅಭಿವೃದ್ಧಿ ಶ್ರಮಿಸಬೇಕೆಂಬ ಮಹದಾಸೆಯನ್ನು ಹೊಂದಿದ್ದೇನೆ.
ತಾಲೂಕಿನ ಮತದಾರರು ಸ್ನಾತಕೋತ್ತರ ಪದವೀಧರನಾದ ನನಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕುವ ಮೂಲಕ ಬೆಂಬಲಿಸಬೇಕೆಂದು ಲೋಕೇಶ್ ಮನವಿ ಮಾಡಿದರು.
ತಾಲೂಕು ಕೆ.ಆರ್.ಎಸ್. ಹಿನ್ನೇರಿಗೆ ಹೊಂದಿಕೊಂಡಿದೆ ಹಾಗೂ ಸುತ್ತಲೂ ಹೇಮಾವತಿ ನದಿ ಮತ್ತು ಕಾಲುವೆಗಳು ಹರಿಯುತ್ತಿವೆ ಆದರೂ ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ನನಗೆ ಶಾಸಕನಾಗುವ ಅವಕಾಶ ಒದಗಿ ಬಂದರೆ ತಕ್ಷಣ ತಾಲೂಕಿನಲ್ಲ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ಯೋಜನೆ ರೂಪಿಸುತ್ತೇನೆ ಎಂದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಾರಕ್ಕೊಮ್ಮೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಗ್ರಾಮಸ್ಥರ ಕುಂದು-ಕೊರತೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡುತ್ತೇನೆ ಹೀಗೆ ತಾಲೂಕಿನ ಅಭಿವೃದ್ಧಿಗೆ ದುಡಿಯುವ ಯೋಜನೆಗಳನ್ನು ತಾವು ರೂಪಿಸಿಕೊಂಡಿದ್ದು ಇದಕ್ಕೆ ತಾಲೂಕಿನ ಮಹಾಜನತೆ ಅವಕಾಶ ಒದಗಿಸಿಕೊಡಬೇಕೆಂದು ಲೋಕೇಶ್ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ