ಏ.23 ರಂದು ಪದ್ಮಭೂಷಣ ಡಾ.ರಾಜ್ ಕುಮಾರ್ ಜಯಂತಿ ಗೀತ ನಮನ ಹಾಗೂ ಉಪನ್ಯಾಸ ಕಾರ್ಯಕ್ರಮ

 

ಬೆಂಗಳೂರು,ಏ.20- ಬೆಂಗಳೂರು ನಗರ ಜಿಲ್ಲೆ ಸರ್ ಸಿ.ವಿ ರಾಮನ್ ನಗರ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ಇದೇ 23 ರಂದು ಪದ್ಮಭೂಷಣ ಡಾ.ರಾಜ್ ಕುಮಾರ್ ಜಯಂತಿ ಗೀತ ನಮನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಇದೇ 23 ರಂದು ಸಂಜೆ 5 ಗಂಟೆಗೆ ಚಾಮರಾಜಪೇಟೆಯ ಕುವೆಂಪು ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕಸಾಪ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅಧ್ಯಕ್ಷ ಎಂ. ತಿಮ್ಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿಜಯ ಸಂಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಪೆÇ್ರೀ ಕುಮಾರ್’-ಬದುಕು ಜೀವನ ಶೈಲಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದು, ಬೆಂಗಳೂರು ವಿವಿಯ ಲೇಖಕರಾದ ಲಕ್ಷ್ಮಿಶ್ರೀನಿವಾಸ್ ಕನ್ನಡ ಚಲನಚಿತ್ರ ಜಗತ್ತು ಮತ್ತು ರಾಜ್ ಕುಮಾರ್ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಇದೇ ವೇಳೆ ಕಾರ್ಮಿಕ ಮುಖಂಡ ,ಕನ್ನಡ ಪರ ಹೋರಾಟಗಾರ ಜಗದೀಶ್ ಮತ್ತು ರಾಜಾಜೀನಗರ ಕ್ಷೇತ್ರದ ಕಸಾಪ ಅಧ್ಯಕ್ಷ ಲೋಕೇಶ್ ಅವರಿಗೆ ಸನ್ಮಾನ ಮಾಡಲಾಗುವುದು.
ಬೆಂಗಳೂರು, ಏ.20-ಯಶವಂತಪುರ ಮತ್ತು ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ನಕಲಿ ಮತದಾರರು ಸೇರ್ಪಡೆಯಾಗಿದ್ದು, ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಬೇಕು ಹಾಗೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರು ಬೆಂಗಳೂರು ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಏರೋಹಳ್ಳಿ ವಾರ್ಡ್‍ನ ಮತಗಟ್ಟೆ ಸಂಖ್ಯೆ 66, 68 ಮತ್ತಿತರ ಕೇಂದ್ರಗಳಲ್ಲಿ ಸುಮಾರು 951 ಜನ ಫಾರಂ ನಂಬರ್ 6ರ ಮೂಲಕ ಹೆಸರು ನೋಂದಣಿ ಮಾಡಿದ್ದಾರೆ. (ಏ.1ನೇ ತಾರೀಖಿನಿಂದ 16ರೊಳಗೆ) ಇಆರ್‍ಎಂಎಸ್ ಕಂಪ್ಯೂಟರ್ ಮೂಲಕ ಅಕ್ರಮವಾಗಿ ಲಾಗಿನ್ ಆಗಿ ಅಧಿಕೃತವಾಗಿ ಫಾರಂ ಅಪ್‍ಲೋಡ್ ಮಾಡಿದ್ದಾರೆ. ಇದು ನಿಯಮ ಬಾಹಿರ.

ಅದೇ ರೀತಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿಯಲ್ಲಿ 861, ಪಣ್ಯದಲ್ಲಿ 400, ಹೆಗ್ಗನಹಳ್ಳಿಯಲ್ಲಿ 204, ದಾಸರಹಳ್ಳಿಯಲ್ಲಿ 425, ತಾಲೂಕು ಕಚೇರಿ ವ್ಯಾಪ್ತಿಯಲ್ಲಿ 264 ಮಂದಿ ಸೇರಿದಂತೆ ಒಟ್ಟು 2154 ಮಂದಿ ಫಾರಂ ನಂಬರ್ 6ರಲ್ಲಿ ನಮೂದಿಸದೆಯೇ ಹೆಸರು ಸೇರ್ಪಡೆ ಮಾಡಲಾಗಿದೆ.

ಫಾರಂ ನಂಬರ್ 6 ವಿತರಣೆ ಮಾಡಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವರು ಅಕ್ರಮವಾಗಿ ಹೆಸರು ಸೇರ್ಪಡೆ ಮಾಡಿರುವ ಹಿನ್ನೆಲೆಯಲ್ಲಿ ದಾಸರಹಳ್ಳಿಯ 2154, ಯಶವಂತಪುರದ 951 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಹಾಗೂ ಅಕ್ರಮವಾಗಿ ಹೆಸರು ಸೇರ್ಪಡೆ ಕುರಿತು ಸೂಕ್ತ ತನಿಖೆ ನಡೆಸುವಂತೆ ದಯಾನಂದ್ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ