ಬೆಂಗಳೂರು, ಏ.20- ನೀವು ನಿಮ್ಮ ಕ್ಷೇತ್ರದ ಬಗ್ಗೆ ಹಾಗೂ ಅಲ್ಲಿನ ರಾಜಕೀಯ ಮುಖಂಡರ ಬಗ್ಗೆ ತಿಳಿದುಕೊಳ್ಳಬೇಕೆ ಹಾಗಾದರೆ ಲಾಗಿನ್ ಆಗಿ ಬೆಂಗಳೂರಿಯನ್.ಕಾಮ್(ಃಚಿಟಿgಚಿಟoಡಿeಚಿಟಿ.ಛಿom)ಗೆ.
ಬೆಂಗಳೂರಿಗೆ ಸೀಮಿತವಾಗಿರುವ ಇಂತಹ ಒಂದು ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ ಬಿಎಸ್ಆರ್ ಐಟಿ ಸಲ್ಯೂಷನ್ಸ್ ಸಂಸ್ಥೆ.
ಇಡೀ ವಿಶ್ವದಲ್ಲೇ ಗಮನಸೆಳೆದಿರುವ ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಯಾವ ಯಾವ ಅಭಿವೃದ್ದಿ ಕಾಮಗಾರಿಗಳಾಗಿವೆ, ಯಾವ ಕ್ಷೇತ್ರ ಎಷ್ಟು ಮುಂದುವರೆದಿದೆ, ಅಲ್ಲಿನ ರಾಜಕೀಯ ಮುಖಂಡರು ಯಾರು ಎಂಬ ಎಲ್ಲ ಸಂಪೂರ್ಣ ವಿವರ ಈ ಡಾಟ್ ಕಾಮ್ನಲ್ಲಿ ಲಭ್ಯವಿದೆ.
ಆಯಾ ಕ್ಷೇತ್ರಗಳಲ್ಲಿ ಇರುವ ಗಣ್ಯ ವ್ಯಕ್ತಿಗಳ ಮಾಹಿತಿಯು ಈ ಡಾಟ್.ಕಾಮ್ನಲ್ಲಿ ದೊರೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿರುವ ಗಣ್ಯರ ಮಾಹಿತಿಯೂ ಲಭ್ಯವಿದೆ.
ಆಯಾ ಕ್ಷೇತ್ರಗಳನ್ನು ಪ್ರತಿನಿಧಿಸುವ ರಾಜಕೀಯ ಮುಖಂಡರ ಮಾಹಿತಿ ಅಲ್ಲದೆ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳ ಪ್ರಣಾಳಿಕೆ ಬಗ್ಗೆಯೂ ಬೆಂಗಳೂರಿಯನ್.ಕಾಮ್ ಬೆಳಕು ಚೆಲ್ಲಲಿದೆ.
ಉತ್ತಮ ನಗರ ನಿರ್ಮಾಣಕ್ಕೆ ಬಲಿಷ್ಠ ನಾಯಕರ ಅಗತ್ಯವಿದೆ. ಹಾಗಾಗಿ ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಯಾ ಕ್ಷೇತ್ರಕ್ಕೆ ಯಾರು ಉತ್ತಮ ಅಭ್ಯರ್ಥಿ ಎಂಬುದನ್ನು ಮತದಾರರು ಈ ಡಾಟ್ಕಾಮ್ ಮೂಲಕ ಪಡೆದುಕೊಂಡು ಉತ್ತಮ ರಾಜಕಾರಣಿಯನ್ನು ಆರಿಸಲು ಸಹಕಾರಿಯಾಗಲಿದೆ.
ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಪರಿವರ್ತನೆಗೊಂಡ ಬಗ್ಗೆ ಇಲ್ಲಿರುವ ಕ್ರೀಡಾ ತರಬೇತುದಾರರು, ಕ್ರೀಡಾಂಗಣಗಳು ಸೇರಿದಂತೆ ನಗರದ ಸಮಗ್ರ ಮಾಹಿತಿಗೆ ಮುನ್ನುಡಿ ಬರೆದಿದೆ ಬೆಂಗಳೂರಿಯನ್.ಕಾಮ್.