ಚಲಿಸುತ್ತಿದ್ದ ಆಟೋಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ:

ನೆಲಮಂಗಲ, ಏ.19- ಚಲಿಸುತ್ತಿದ್ದ ಆಟೋಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿ ನಾಲ್ವರು ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಅರಿಶಿನಕುಂಟೆ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಶಿರಾ ಮೂಲದ ಮಂಜಮ್ಮ (52) ಎಂದು ತಿಳಿದು ಬಂದಿದೆ.
ತುಮಕೂರು ರಸ್ತೆ 8ನೆ ಮೈಲಿ ನೆಲಗದರನಹಳ್ಳಿಯಲ್ಲಿ ವಾಸವಾಗಿದ್ದರು. ತಮ್ಮೂರಿಗೆ ತೆರಳಿ ವಾಪಸಾಗುವಾಗ ಈ ದುರ್ಘಟನೆ ಸಂಭವಿಸಿದೆ.
ಆಟೋ ಚಾಲಕ ಹನುಮಂತೇಗೌಡ ಅವರ ಪತ್ನಿ ಪುಷ್ಪಲತಾ , ಅವರ ಮಕ್ಕಳಾದ ಅಂಕಿತಾ, ಪೂರ್ಣಿಮಾ ಎಂಬುವರು ಗಾಯಗೊಂಡಿದ್ದು , ಅವರನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ