ಬೆಂಗಳೂರು.ಏ.19- ಪ್ರಜಾಪರಿವರ್ತನಾ ಪಾರ್ಟಿ ಇಂದು 17 ಅಭ್ಯರ್ಥಿಗಳ ಪಟ್ಟಿ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪಾರ್ಟಿಯ ರಾಜ್ಯದ್ಯಕ್ಷ ಬಿ. ಗೋಪಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಾರ್ವಜನಿಕರಿಗೆ ಉದ್ಯೋಗ ಸೃಷ್ಟಿ, ಎಲ್ಲಾ ಜಿಲ್ಲೆಗಳಲ್ಲಿ ಐಟಿ-ಬಿಟಿ ಕೇಂದ್ರಗಳ ಸ್ಥಾಪನೆ, ಯವಜನರಿಗೆ ಕೌಶಲ್ಯ ತರಬೇತಿ, ಹಣಕಾಸು ನೆರವು ಮತ್ತು ಮಾರುಕಟ್ಟೆ ನೆರವು ನೀಡುವುದು.
ಜನರಿಕ್ ಔಷಧಿ ಮಳಿಗೆಗಳನ್ನು ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಸ್ಥಾಪಿಸಲಾಗುತ್ತದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವಿವಿ ಸ್ಥಾಪನೆ , ರೈತರಿಗೆ ಅಂತರಾಷ್ಠೀಯಮಟ್ಟದಲ್ಲಿ ಅತ್ಯುತ್ತಮ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಡಲಾಗುವುದು. ಹಾಗೂ ನಮ್ಮ ಪ್ರಣಾಳಿಕೆಯಲ್ಲಿ ಒಳಗೊಂಡಿರುವಂತಹ ಕಾರ್ಯಕ್ರಮಗಳನ್ನು ನೆರವೇರಿಸುವುದಾಗಿ ತಿಳಿಸಿದರು