ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಪಾಷರ ಪ್ರಚಾರಕ್ಕಾಗಿ ಅನುಮತಿ ಇಲ್ಲದೆ ಬಳಸುತ್ತಿದ್ದ ಮೂರು ಕಾರುಗಳ ವಶ:

ಕೋಲಾರ,ಏ.19- ವಿಧಾನಸಭಾ ಚುನಾವಣೆಯ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಪಾಷರ ಪ್ರಚಾರಕ್ಕಾಗಿ ಅನುಮತಿ ಇಲ್ಲದೆ ಬಳಸುತ್ತಿದ್ದ ಮೂರು ಕಾರುಗಳನ್ನು ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ವಶಪಡಿಸಿಕೊಂಡಿದ್ದಾರೆ.
ಜಮೀರ್ ಪಾಷ ಅವರನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ನಂತರ ಕೋಲಾರಕ್ಕೆ ಆಗಮಿಸಿದಾಗ, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿ ಕರೆತರುತ್ತಿದ್ದರು.
ಹಳೆ ಬಸ್ ನಿಲ್ದಾಣದ ಬಳಿ ಚುನಾವಣಾಧಿಕಾರಿಗಳು ಕಾರುಗಳನ್ನು ಜಪ್ತಿ ಮಾಡಿ ಗಲ್‍ಪೇಟೆ ಠಾಣೆಗೆ ಒಪ್ಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ