ಬೆಂಗಳೂರು ಏ17: ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಕರ್ನಾಟಕ ವಿಧಾನ ಸಭೆ 2018 ಚುನಾವಣೆಯ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿಯ ರಾಜ್ಯದ ರಾಜ್ಯಕೀಯ ವ್ಯವಹಾರಗಳ ಮತ್ತು ಸಹ ಸಂಚಾಲಕರಾದ ಶ್ರೀ ಶಿವಕುಮಾರ್ ಚೆಂಗಲರಾಯರವರು ಬಿಡುಗಡೆ ಮಾಡಿದರು.
ಅವರು ಮಾತನಾಡಿ ಜನರು ಸಾಂಪ್ರದಾಯಿಕ ರಾಜಕೀಯನ್ನು ಬಿಟ್ಟು ಪರ್ಯಾಯ ರಾಜಕೀಯವನ್ನು ಹುಡುಕುತ್ತಿದ್ದಾರೆ, ನಮ್ಮ ದಿಲ್ಲಿ ಸರ್ಕಾರವು ೩ ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳ್ಳಲ್ಲಿ ಒಳ್ಳೆ ಕೆಲಸ ಮಾಡಿ ತೋರಿಸಿದ್ದಾರೆ, ಇದರಿಂದ ನಾವು ಪ್ರಪಂಚದಾದ್ಯಂತದ ಶ್ಲಾಘನೆಗಳನ್ನು ಸ್ವೀಕರಿಸಿದ್ದೇವೆ. ನಮ್ಮ ಯಾವುದೇ ಅಭ್ಯರ್ಥಿ ಯಾವುದೇ ಭ್ರಷ್ಟಾಚಾರ, ಕೋಮುವಾದಿ ಅಥವಾ ಅಪರಾಧ ಚಟುವಟಿಕೆಗಳ್ಲಲಿ ತೊಡಗಿಲ್ಲ ಎಂದರು.
ನಾವು ಟಿಕೆಟ್ಗಳನ್ನು ಒಳ್ಳೆಯ ವ್ಯಕ್ತಿಗಳಿಗೆ ನೀಡುವ ಮೂಲಕ ಮಾನದಂಡಗಳನ್ನು ಹೊಂದಿದ್ದೇವೆ, ಆದ್ದರಿಂದ ಸಭೆಯಲ್ಲಿ ಭ್ರಷ್ಟ ಮತ್ತು ಅಪರಾಧಿಗಳ ಧ್ವನಿಯನ್ನು ಮುಳುಗಿಸಲಾಗಿದ್ದು ಶ್ರೀಸಾಮಾನ್ಯ ಜನರ ಧ್ವನಿ ಎತ್ತಿಡುತ್ತೇವೆ ಎಂದರು.
ಎರಡನೆಯ ಪಟ್ಟಿಯ ಅಭ್ಯರ್ಥಿಗಳ ಹೆಸರುಗಳು ಹೀಗಿವೆ
ಆಸೀಫ್ ಹೆರ್ಕಲ್ – ದೇವರ ಹಿಪ್ಪರಗಿ
ಅಜಿತ್ ಬಾಬು – ರಾಮನಗರ
ಭಾಸ್ಕರ್ ಪ್ರಸಾದ್ – ಮಹದೇವಪುರ
ಇಲ್ಲಂಗೋವನ್ – ಗಾಂಧಿನಗರ
ಫಾರೂಕ್ ಸಾಬ ನದಾಫ್ – ಬೆಳಗಾವಿ ಉತ್ತರ
ಸದಾನಂದ ಮೇತ್ರಿ – ಬೆಳಗಾವಿ ದಕ್ಷಿಣ
ಸಂಜೀವ ಕುಮಾರ್ ಕರಿಕಲ್ – ಕಲಬುರ್ಗಿ ಉತ್ತರ
ಡಾ. ಸುಂದರ ಗೌಡ – ಚಿಕ್ಕಮಗಳೂರು
ಪ್ರಭುಸ್ವಾಮಿ – ಗುಬ್ಬಿ
ಎಸ. ಎಫ್. ಪಾಟೀಲ್ – ಧಾರವಾಡ