
ಬೆಂಗಳೂರು. ಏ.18- ಕಾಂಗ್ರೆಸ್ ಪಕ್ಷದಲ್ಲಿ 46 ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ನನಗೆ ಕಡೂರು ವಿಧಾನಸಭಾಕ್ಷೇತ್ರದ ಟಿಕೆಟ್ ನೀಡಬೇಕೆಂದು ಕಡೂರು ಪಿ.ನಂಜಪ್ಪ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ನಾನು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದೆ. ಆದರೆ ನನಗೆ ನೀಡದೆ ಆನಂದ್ ಅವರಿಗೆ ಟಿಕೆಟ್ ನೀಡಿರುವುದರಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದರು.
ಆನಂತ ಅವರಿಗೆ ಇನ್ನೂ ಬಿ ಫಾರಂ ನೀಡಿಲ್ಲದ ಕಾರಣ ವರಿಷ್ಠರು ತಮ್ಮ ನಿರ್ಧಾರ ಬದಲಿಸಿ ನಿನಗೆ ಬಿ ಫಾರಂ ನೀಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ತ್ವ ಸಿದ್ಧಾಂತ ನೀತಿ ನಿಯಮಗಳನ್ನು ಚಾಚು ತಪ್ಪದೆ ಬಂದಿರುವ ನಮ್ಮಂಥ ನಿಷ್ಠಾವಂತರಿಗೆ ಟಿಕೆಟ್ ನೀಡದೆ ವಲಸಿಗರಿಗೆ ಆಧ್ಯತೆ ನೀಡಿ ಟಿಕೆಟ್ ನೀಡಲಾಗಿದೆ ಎಂದು ದೂರಿದರು.