ಅಮೆರಿಕದ ಮಾಜಿ ಪ್ರಥಮ ಮಹಿಳೆ ಬಾರ್ಬರ ಪಿಯರ್ಸ್ ಬುಲ್ ನಿಧನ:

ವಾಷಿಂಗ್ಟನ್/ಹೌಸ್ಟನ್, ಏ.18-ಅಮೆರಿಕ ಮಾಜಿ ರಾಷ್ಟ್ರಾಧ್ಯಕರ ಪತ್ನಿ ಮತ್ತು ಮತ್ತೊಬ್ಬ ಅಧ್ಯಕ್ಷರ ತಾಯಿ, ಅಮೆರಿಕದ ಮಾಜಿ ಪ್ರಥಮ ಮಹಿಳೆ ಬಾರ್ಬರ ಪಿಯರ್ಸ್ ಬುಲ್ ಇಂದು ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಅವರು ಪತಿ, ಐವರು ಮಕ್ಕಳು, 17 ಮೊಮ್ಮಕ್ಕಳು ಹಾಗೂ ಏಳು ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಹೌಸ್ಟನ್‍ನ ತಮ್ಮ ಮನೆಯಲ್ಲಿ ಬಾರ್ಬರ ಅವರು ಕೊನೆಯುಸಿರೆಳೆಯುವಾಗ ಇವರ ಪತಿ ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ್ ಹಬರ್ಟ್ ವಾಕರ್ ಬುಷ್ ಮತ್ತು ಪುತ್ರ, ಮಾಜಿ ಅಧ್ಯಕ್ಷ ಜಾರ್ಜ್ ವಾಕರ್ ಬುಷ್ ಹಾಗೂ ಕುಟುಂಬದ ಇತರ ಸದಸ್ಯರು ಜೊತೆಗಿದ್ದರು.
ಕಳೆದ ವರ್ಷ ಜನವರಿಯಲ್ಲಿ ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾದರು ಎಂದು ಅವರ ಪತಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾರ್ಬರ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ