ಬೆಳಗಾವಿ, ಏ.18- ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದರೆನ್ನಲಾದ 7 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆದು ಆರೋಪಿಯೊಬ್ಬನನ್ನು ಬೆಳಗಾವಿ ಪೆÇಲೀಸರು ಬಂಧಿಸಿದ್ದಾರೆ.
ವಿಜಯಪುರ ಮೂಲದ ಅಜಿತ್ ನಿಡೋಣಿ(35) ಬಂಧಿತ ಆರೋಪಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ನಗರದ ಪಿಡಬ್ಲ್ಯುಡಿ ಖಾಲಿ ಇದ್ದ ವಸತಿ ಗೃಹದಲ್ಲಿ 500 ರೂ. ಮುಖಬೆಲೆಯ 263 ಬಂಡಲ್, 2000 ರೂ. ಮುಖಬೆಲೆಯ 296 ಬಂಡಲ್ ನಕಲಿ ನೋಟುಗಳು ಪತ್ತೆಯಾಗಿವೆ.
ಖಾಲಿ ಇರುವ ಪಿಡಬ್ಲ್ಯುಡಿ ವಸತಿ ಗೃಹಕ್ಕೆ ಕಾರೊಂದು ಆಗಾಗ್ಗೆ ಬಂದು ಹೋಗುತ್ತಿತ್ತು. ಇದರಿಂದ ಅನುಮಾನಪಟ್ಟ ಸಾರ್ವಜನಿಕರು ಪೆÇಲೀಸರು ಮಾಹಿತಿ ನೀಡಿದ್ದಾರೆ.
ಈ ಜಾಡು ಹಿಡಿದ ಪೆÇಲೀಸರು ದಾಳಿ ನಡೆಸಿದಾಗ ಇಷ್ಟು ದೊಡ್ಡ ಪ್ರಮಾಣದ ನಕಲಿ ನೋಟುಗಳು ಪತ್ತೆಯಾಗಿವೆ.
ಆರೋಪಿಯನ್ನು ವಶಪಡಿಸಿಕೊಂಡಿರುವ ಬೆಳಗಾವಿ ಪೆÇಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಈ ನಕಲಿ ನೋಟುಗಳು ಎಲ್ಲಿಂದ ಬಂತು, ಯಾವುದಕ್ಕೆ ಬಳಸಲು ಇವುಗಳನ್ನು ತಯಾರು ಮಾಡಲಾಗುತ್ತಿತ್ತು. ಇವು ಖೋಟಾ ನೋಟುಗಳೇ, ಚುನಾವಣೆ ಸಂದರ್ಭದಲ್ಲಿ ಅಸಲಿ ನೋಟುಗಳ ಜೊತೆ ಇವುಗಳನ್ನು ಚಲಾವಣೆ ಮಾಡುವ ಸಂಚು ರೂಪಿಸಲಾಗುತ್ತಿತ್ತೇ ಎಂಬ ಬಗ್ಗೆ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
ಎಪಿಎಂಸಿ ಪೆÇಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಬೆಳಗಾವಿ ಪೆÇಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆ, ಏ.18 -ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿಯಲ್ಲಿ ಕಾರ್ಯಕರ್ತರು ಸಭೆ ನಡೆಸಿ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪನವರು ಕಳೆದ 15 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾಂಗ್ರೆಸ್ ಉಳಿವಿಗೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್.ಬಿ.ಮಂಜಪ್ಪನವರಿಗೆ ಟಿಕೆಟ್ ಬಿ ಫಾರಂ ಸಿಗುತ್ತದೆ ಎಂದು ಘೋಷಣೆ ಮಾಡಿದ್ದರು. ಇದರಿಂದ ಸಂತಸಪಟ್ಟಿದ್ದರು. ಆದರೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪನವರು ಕುರುಬ ಸಮಾಜಕ್ಕೆ ಸೇರಿದವರಾಗಿದ್ದು, ಮತಗಳನ್ನು ಗಣನೆಗೆ ತೆಗೆದುಕೊಂಡರೆ ಅವರು ಜಯಶಾಲಿ ಆಗುತ್ತಿದ್ದರೆಂದು ಕಾರ್ಯಕರ್ತರು ಸಭೆಯಲ್ಲಿ ತಿಳಿಸಿದರು.