ಬೆಂಗಳೂರು, ಏ.17- ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಪಕ್ಷದ ಅಭ್ಯರ್ಥಿಗಳು ತಮ್ಮ ಪ್ರಚಾರ ಸಾಮಗ್ರಿಗಳನ್ನು ಕಡ್ಡಾಯವಾಗಿ ಕನ್ನಡದಲ್ಲೇ ಮುದ್ರಿಸಲು ಆದೇಶ ನೀಡುವಂತೆ ಕನ್ನಡ ಅನುಷ್ಠಾನ ಮಂಡಳಿ ಪದಾಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಚುನಾವಣಾ ಅಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಮಂಡಳಿ ಅಧ್ಯಕ್ಷ ಆರ್.ಎ.ಪ್ರಸಾದ್, ಪೆÇ್ರ.ನ.ದೀಪಾಚಾರ್ಯ ಮತ್ತಿತರರು ಚುನಾವಣಾಧಿಕಾರಿ ಸಂಜೀವ್ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡವಾದರೂ ಕೆಲವು ಅಭ್ಯರ್ಥಿಗಳು ಅನ್ಯ ಜಾತಿಯ ಮತಗಳನ್ನು ಸೆಳೆಯಲು ಪರಭಾಷೆಯಲ್ಲಿ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಿದ್ದಾರೆ. ಇದೂ ಕೂಡ ವೋಟಿಗಾಗಿ ನೋಟು ಮಾದರಿಯಲ್ಲೇ ಆಮಿಷವೊಡ್ಡಿದಂತಾಗುತ್ತದೆ. ಹಾಗಾಗಿ ಚುನಾವಣಾ ಆಯೋಗ ತುರ್ತು ಕ್ರಮ ಕೈಗೊಂಡು ಅನ್ಯಭಾಷೆಯ ಕರಪತ್ರ ಹಂಚುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆಯೋಗ ಕೂಡಲೇ ಚುನಾವಣೆಗೆ ನೇಮಿಸಿರುವ ಅಧಿಕಾರಿಗಳಿಗೆ ಆದೇಶ ನೀಡಿ ಯಾರ್ಯಾರು ಅನ್ಯಭಾಷೆಯಲ್ಲಿ ಕರಪತ್ರ ಮುದ್ರಿಸಿ ಹಂಚುತ್ತಿದ್ದರೋ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.