ಮೈಸೂರು, ಏ.17- ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೈಸೂರಿಗೆ 11 ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಸ್ಥಳ ನಿಗದಿಗೊಳಿಸಿ ಜಿಲ್ಲಾಡಳಿತ ಸಜ್ಜಾಗಿದೆ.
ಕೃಷ್ಣರಾಜ ಕ್ಷೇತ್ರ: ಮೈಸೂರು ಮಹಾನಗರ ಪಾಲಿಕೆ ಮುಖ್ಯ ಕಛೇರಿ, ಚಾಮರಾಜ: ನಗರ ಪಾಲಿಕೆ ಮುಖ್ಯ ಕಛೇರಿ, ನರಸಿಂಹ ರಾಜ: ಚಾಮುಂಡಿ ವಿಹಾರ ಕ್ರೀಡಾಂಗಣ.
ಚಾಮುಂಡೇಶ್ವರಿ: ಮಿನಿ ವಿಧಾನಸೌಧ , ವರುಣಾ: ತಾಲ್ಲೂಕು ಪಂಚಾಯ್ತಿ ಕಛೇರಿ, ನಂಜನಗೂಡು:ಮಿನಿ ವಿಧಾನಸೌಧ, ಟಿ.ನರಸೀಪುರ: ಮಿನಿ ವಿಧಾನಸೌಧ, ಎಚ್.ಡಿ.ಕೋಟೆ: ಮಿನಿ ವಿಧಾನಸೌಧ, ಪಿರಿಯಾಪಟ್ಟಣ: ಮಿನಿ ವಿಧಾನಸೌಧ, ಕೆ.ಆರ್.ನಗರ: ಮಿನಿ ವಿಧಾನಸೌಧ, ಹುಣಸೂರು: ಮಿನಿ ವಿಧಾನಸೌಧ ಉಪ ವಿಭಾಗಾಧಿಕಾರಿ ಕಛೇರಿ.
ಇಂದಿನಿಂದ ಏ.24ರವರೆಗೆ ನಾಮಪತ್ರ ಸಲ್ಲಿಸಲು ಆವರಣ ಕಲ್ಪಿಸಲಾಗಿದ್ದು , ಏ.27ರವರೆಗೆ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಪಿಂಕ್ ಮತಗಟ್ಟೆ ನಗರ ಹಾಗೂ ಜಿಲ್ಲೆ ಸೇರಿ 6 ಸ್ಥಳಗಳಲ್ಲಿ ಪಿಂಕ್ ಮತಗಟ್ಟೆ ತೆರೆಯಲಾಗುತ್ತದೆ. ಮೈಸೂರು ನಗರದಲ್ಲಿ 5, ಒಂದು ಗ್ರಾಮೀಣ ಪ್ರದೇಶದಲ್ಲಿ ತೆರೆಯಲಾಗುವುದು.
ಈ ಮತಗಟ್ಟೆಗಳಲ್ಲಿ ಭದ್ರತಾ ಸಿಬ್ಬಂದಿಯಿಂದ ಹಿಡಿದು ಎಲ್ಲರೂ ಮಹಿಳೆಯರೇ ಇರುತ್ತಾರೆ.
ಮತಗಟ್ಟೆಗೆ ಪುರುಷ ಮತದಾರರು ಬರುವುದರಿಂದ ಓರ್ವ ಪುರುಷ ಪೆÇಲೀಸ್ ಅಧಿಕಾರಿಯನ್ನು ನೇಮಿಸಲಾಗುತ್ತದೆ.