ದೇಶಾದ್ಯಂತ ಏಟಿಎಂ ಗಳಲ್ಲಿ ಹಣ ಸಿಗದೆ ಸಾರ್ವಜನಿಕರ ಪರದಾಟ: ಇದೊಂದು ತಾತ್ಕಾಲಿಕ ಕೊರತೆ ಎಂದ ವಿತ್ತ ಸಚಿವ ಜೇಟ್ಲಿ

ನವದೆಹಲಿ: ಏ-17: ದೇಶದ ವಿವಿಧ ರಾಜ್ಯಗಳ ಏಟಿಎಂ ಗಳಲ್ಲಿ ಹನ ಸಿಗದೇ ಕರೆನ್ಸಿ ಕೊರತೆ ಎದುರಾಗಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಎಟಿಎಂಗಳಲ್ಲಿ ಎದುರಾಗಿರುವ ಹಣದ ಸಮಸ್ಯೆ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿಕ್ರಿಯಿಸಿದ್ದು, ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದೆ. ಇದೊಂದು ತಾತ್ಕಾಲಿಕ ಕೊರತೆ ಎಂದಿದ್ದಾರೆ.

ದೇಶದ ಹಲವು ಭಾಗಗಳಲ್ಲಿ ಎಟಿಎಂಗಳಲ್ಲಿ ಹಣ ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ದೆಹಲಿ, ಉತ್ತರ ಮಧ್ಯಪ್ರದೇಶ, ಗುಜರಾತ್‌, ಬಿಹಾರ, ಆಂಧ್ರಪ್ರದೇಶ ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಹಣದ ಸಮಸ್ಯೆ ಎದುರಾಗಿದ್ದು, ಎಟಿಎಂಗಳಲ್ಲಿ ‘ನೋ ಕ್ಯಾಶ್‌’ ಇಲ್ಲವೇ, ‘ನಾಟ್‌ ವರ್ಕಿಂಗ್‌’ ಬೋರ್ಡ್‌ಗಳನ್ನು ಹಾಕಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಅರುಣ್ ಜೇಟ್ಲಿ ಅವರು ದೇಶದಲ್ಲಿ ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದ್ದು ಇನ್ನು ತಾತ್ಕಾಲಿಕ ನಗದು ಕೊರತೆ ನಿವಾರಣೆಗೆ ತ್ವರಿತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಚಲಾವಣೆಯಲ್ಲಿರುವ ಸಾಕಷ್ಟು ಕರೆನ್ಸಿ ಬ್ಯಾಂಕ್ ಗಳಲ್ಲಿ ಲಭ್ಯವಿದೆ. ಕೆಲವು ಪ್ರದೇಶಗಳಲ್ಲಿ ಹಠಾತ್ ಮತ್ತು ಅಸಾಮಾನ್ಯ ಹೆಚ್ಚಳ(ಬೇಡಿಕೆ) ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ನಗದು ಕೊರತೆ ಎದುರಾಗಿದ್ದು ತಾತ್ಕಾಲಿಕ ಕೊರತೆಯನ್ನು ತ್ವರಿತವಾಗಿ ನಿಭಾಯಿಸಲಾಗುವುದು ಎಂದಿದ್ದಾರೆ.

Dry ATM,People suffer, More than adequate currency in circulation, FM Arun Jaitley

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ