ಡಾ. ರಾಜಕುಮಾರ್ ರವರ 12ನೇ ಪುಣ್ಯ ತಿಥಿ ಸಂದರ್ಭದಲ್ಲಿ ಒಂದು ವಿಶೇಷ ಸ್ಮರಣೆ
ಹೈದರಾಬಾದ್ನಲ್ಲಿ ಈ ಟಿವಿ ಕಾರ್ಯಕ್ರಮದ ವೇಳೆ ನಟಿ ಸುಲಕ್ಷಣ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಮ್ರವರಿಗೆ ನೀವು ಕನ್ನಡ ದಿಗ್ಗಜ ಡಾ.ರಾಜ್ಕುಮಾರ್ ಅವರಿಗೆ ಹಾಡಿದ್ದೀರ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಎಸ್.ಪಿ.ಬಿ. ರಾಜ್ಕುಮಾರ್ ನನಗೆ ಹಾಡಿದ್ದಾರೆ, ಹಿಂದಿಯಲ್ಲಿ ಕಿಶೋರ್ ಕುಮಾರ್ ಕೂಡ ನಟಿಸಿ ಹಾಡು ಹೇಳುತ್ತಿದ್ದರು, ಅದರೆ ದಕ್ಷಿಣ ಭಾರತದಲ್ಲಿ ಅಪರೂಪವೆಂಬತೆ ರಾಜ್ಕುಮಾರ್ ಒಬ್ಬರೇ ನಟನೆಯನ್ನು ಮಾಡಿ ಹಾಡನ್ನು ಹೇಳುತ್ತಿದ್ದರು ಎಂದು ಹೇಳಿದರು.
ಡಾ.ರಾಜ್ಕುಮಾರ್ ಅವರಿಗೆ ಪಿ.ಬಿ.ಶ್ರೀನಿವಾಸ್ ಹಾಡುತ್ತಿದ್ದರು, ಅವರ ಧ್ವನಿ ಪಿಬಿಎಸ್ ಅಂದರೆ ರಾಜ್ಕುಮಾರ್, ರಾಜ್ಕುಮಾರ್ ಅಂದರೆ ಪಿಬಿಎಸ್ ಅನ್ನುವಂತಿತ್ತು. ಒಂದು ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ರಾಜ್ಕುಮಾರ್ ಅವರಿಗೆ ಹಾಡಲು ಹೇಳಿದರು. ಹಾಡು ತುಂಬಾ ಜನಪ್ರಿಯವಾಯಿತು, ರಾಜ್ಕುಮಾರ್ ಅವರಿಗೆ ಮೊದಲಿನಿಂದಲೂ ಸಂಗೀತದ ಬಗ್ಗೆ ಗೊತ್ತಿತ್ತು, ಮೊದ ಮೊದಲು ಒಂದು ಸಿನಿಮಾದಲ್ಲಿ 4 ಹಾಡುಗಳು ಇದ್ದರೆ, 2 ಹಾಡು ಪಿಬಿಎಸ್ 2 ಹಾಡು ರಾಜ್ಕುಮಾರ್ ಹಾಡುತ್ತಿದ್ದರು. ನಂತರ ರಾಜ್ಕುಮಾರ್ ಅವರ ಸಿನಿಮಾದಲ್ಲಿ ಎಲ್ಲ ಹಾಡುಗಳನ್ನು ಅವರೇ ಹಾಡತೊಡಗಿದರು. ರಾಜ್ಕುಮಾರ್ ಅವರು ಹಾಡಿರುವ ನಾದಮಯ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ ಎಂದು ಎಸ್.ಪಿ.ಬಿ. ಹೇಳಿದರು.
ನಾನು ಒಂದು ಸಿನಿಮಾದಲ್ಲಿ ಮಾವನ ಪಾತ್ರ ಮಾಡಿದ್ದೆ, ಶಶಿಕುಮಾರ್ ಸಿನಿಮಾದ ನಾಯಕರಾಗಿದ್ದರು, ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದವು, ಅ ಸಿನಿಮಾಕ್ಕೆ ನನ್ನದೇ ಸಂಗೀತ ನಿರ್ದೇಶನವಿತ್ತು ಎಂದು ಹೇಳಿದರು. 4 ಹಾಡುಗಳಲ್ಲಿ 2 ಹಾಡು ನನಗೆ ಇತ್ತು.ಆಗ ನಾನು ಶಶಿಕುಮಾರ್ ಅವರಿಗೆ ಬೇರೆಯವರು ಹಾಡಲಿ ಎಂದು ಹೇಳಿದಾಗ, ಅದಕ್ಕೆ ಅವರು ನನಗೆ ನೀವೆ ಹಾಡಬೇಕು ಎಂದು ಹೇಳಿದರು. ನಂತರ ನಿರ್ದೇಶಕರು ಸಾರ್ ನಿಮಗೆ ಬೇರೆಯವರು ಹಾಡಲಿ ಎಂದು ಹೇಳಿದರು, ಅದಕ್ಕೆ ನಾನು ನನಗೆ ರಾಜ್ಕುಮಾರ್ ಅವರು ಹಾಡಲಿ ಎಂದಾಗ ನಿರ್ದೇಶಕರು ಒಪ್ಪಿದರು.
ನಾನೇ ರಾಜ್ಕುಮಾರ್ ಅವರ ಬಳಿಗೆ ಹೋಗಿ ವಿಷಯ ತಿಳಿಸಿದಾಗ, ಅವರು ನೀವು ಮಹಾನ್ ಗಾಯಕರು ನಾನು ನಿಮಗೆ ಹಾಡುವದಾ ಎಂದುರು, ನಾನು ಹಠ ಬಿಡದ ತ್ರಿವಿಕ್ರಮನಂತೆ ನೀವೇ ಹಾಡಬೇಕು ಎಂದು ಹೇಳಿದಾಗ, 2 ಹಾಡುಗಳನ್ನು ಅವರು ನನ್ನ ನಟನೆಗೆ ಹಾಡಿದರು. ನಂತರ ಪೋನ್ ಮಾಡಿ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಳ್ಳಿ ಇಲ್ಲಾ ಅಂದರೆ ನೀವೆ ಹಾಡಿ ಎಂದರು, ಅಂಥಾ ದೊಡ್ಡ ಮನುಷ್ಯ ಎಂದು ರಾಜ್ಕುಮಾರ್ ಕುರಿತು ಎಸ್.ಪಿ.ಬಿ. ಹೇಳಿದರು.
ಎಸ್.ಪಿ.ಬಿ. ನಟಿ ಸುಲಕ್ಷಣ ಅವರನ್ನು ಕುರಿತು ನೀವು ರಾಜ್ಕುಮಾರ್ ಜೊತೆ ನಟಿಸಿದ್ದೀರಲ್ಲಾ ಎಂದು ಕೇಳಿದಾಗ, ಸುಲಕ್ಷಣ ಅವರು ಹೌದು ನನ್ನ 2ನೇ ಸಿನಿಮಾ ಹಾವಿನ ಹೆಡೆಯಲ್ಲಿ ಅವರ ಜೊತೆ ನಾಯಕಿಯಾಗಿ ನಟಿಸಿದ್ದೇನೆ ಎಂದು ಹೇಳಿದರು. ಶೂಟಿಂಗ್ ವೇಳೆಯಲ್ಲಿ ಮೇಕಪ್ ಮಾಡುವ ಸಮಯದಲ್ಲಿ, ರಾಜ್ಕುಮಾರ್ ಅವರು ನನ್ನನ್ನು ಕುರಿತು ನೀವು ಕಲಾವಿದರು, ಕೆಲವು ವಸ್ತುಗಳನ್ನು ನೀವು ನಿಮ್ಮ ಹತ್ತಿರ ಇಟ್ಟುಕೊಂಡಿರಬೇಕು ಎಂದು ಹೇಳಿ, ಅಂದು ಸಂಜೆ ನನಗೆ ಮೇಕಪ್ ಬಾಕ್ಸ್ ಒಂದನ್ನು ಕಾಣಿಕೆಯಾಗಿ ನೀಡಿದರು. ಅದು ನನ್ನ ಜೀವನದ ಅದೃಷ್ಟದ ಬಾಕ್ಸ್, ಅದು ಅವರು ನನಗೆ ಮಾಡಿದ ಆಶೀರ್ವಾದ, ಅ ಬಾಕ್ಸ್ ಈಗಲೂ ನನ್ನ ಹತ್ತಿರ ಇದೆ ಎಂದು ಸುಲಕ್ಷಣ ಹೇಳಿದರು. ಅದಾದ ಮೇಲೆ ನಾನು 13-14 ಸಿನಿಮಾಗಳನ್ನು ಮಾಡಿದೆ, ನಾನು ಅವರ ಜೊತೆ ನಾಯಕಿಯಾಗಿ ನಟಿಸಿದಾಗ ನನಗೆ ಇನ್ನೂ 17 ವರ್ಷ ಎಂದು ಹೇಳಿದರು.
ರಾಜ್ಕುಮಾರ್ ತುಂಬಾ ದೊಡ್ಡ ಮನುಷ್ಯರು ಕರ್ನಾಟಕದಲ್ಲಿ ರಾಜ್ಕುಮಾರ್ ಅಂದರೆ ಪ್ರಾಣ, ಈಗಲೂ ಅಂದರೆ ಅವರ ಸಾವಿನ ನಂತರವೂ ಜನರು ಅವರಿಗೋಸ್ಕರ ಪ್ರಾಣ ಕೊಡಲು ಸಿದ್ದರಿದ್ದಾರೆ ಎಂದು ಎಸ.ಪಿ.ಬಾಲಸುಬ್ರಮಣ್ಯಮ್ ಹೇಳಿದರು.
SPB’s thoughts about Dr. Rajkumar