19 ವರ್ಷದ ಯುವತಿಯೊಬ್ಬಳನ್ನು ದುಷ್ಕರ್ಮಿಯೊಬ್ಬ ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟು 10 ದಿನಗಳ ಕಾಲ ನಿರಂತರ ಅತ್ಯಾಚಾರ:

A little girl poses for photographs to illustrate the topic of child abuse in Canberra, Monday, Oct. 28, 2013. (AAP Image/Lukas Coch) NO ARCHIVING

ನವದೆಹಲಿ, ಏ.15-ದೇಶದ ರೇಪ್ ಕ್ಯಾಪಿಟಲ್ ಎಂಬ ಕುಖ್ಯಾತಿ ಪಡೆದಿರುವ ರಾಜಧಾನಿ ದೆಹಲಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ಹೇಯ ಘಟನೆಯೊಂದು ನಡೆದಿದೆ. 19 ವರ್ಷದ ಯುವತಿಯೊಬ್ಬಳನ್ನು ದುಷ್ಕರ್ಮಿಯೊಬ್ಬ ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟು 10 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.
ಅಮನ್ ವಿಹಾರ್‍ನಲ್ಲಿ ಈ ಕೃತ್ಯ ನಡೆದಿದ್ದು, ಈ ಕೃತ್ಯ ಎಸಗಿದ ಕಾಮುಕ ಕುಲದೀಪ್ ಪರಾರಿಯಾಗಿದ್ದು, ಆತನಿಗಾಗಿ ಪೆÇಲೀಸರು ಬಲೆ ಬೀಸಿದ್ದಾರೆ.
ತನ್ನನ್ನು ಕುಲದೀಪ್ ಅಪಹರಿಸಿ ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ 10 ದಿನಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಯುವತಿ ಪೆÇಲೀಸರಿಗೆ ತಿಳಿಸಿದ್ದಾಳೆ. ಏ.9ರಂದು ಗೃಹ ಬಂಧನದಿಂದ ತಪ್ಪಿಸಿಕೊಂಡ ಯುವತಿ ಪೆÇಲೀಸರಿಗೆ ದೂರು ನೀಡಿದಳು. ಆ ದಿನದಿಂದ ಆತ ನಾಪತ್ತೆಯಾಗಿದ್ದಾನೆ.
ಆರೋಪಿ ಕುಟುಂಬವನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, 10 ದಿನಗಳ ಕಾಲ ಯುವತಿಯನ್ನು ಅಕ್ರಮ ಗೃಹ ಬಂಧನದಲ್ಲಿಟ್ಟಿದ್ದರೂ ಪೆÇಲೀಸರಿಗೆ ಏಕೆ ಮಾಹಿತಿ ನೀಡಿಲ್ಲ ಎಂದು ಪ್ರಶ್ನಿಸಿರುವ ಪೆÇಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಕುಲದೀಪ್ ಮತ್ತು ಯುವತಿ ಕುಟುಂಬದವರು ಪರಸ್ಪರ ಪರಿಚಿತರು. ಪೆÇಲೀಸರು ಎಲ್ಲ ಆಯಾಮಗಳಿಂದಲೂ ವಿಚಾರಣೆ ನಡೆಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ