ಕಾಮನ್‌ವೆಲ್ತ್‌‌ ಗೇಮ್ಸ್‌‌ನಲ್ಲಿ 65 ಕೆಜಿ ವೇಯ್ಟ್‌‌ ಲಿಫ್ಟಿಂಗ್‌‌ ನಲ್ಲಿ ಚಿನ್ನ ಗೆದ್ದ ಪೂನಂ ಯಾದವ್ ಮೇಲೆ ದುಷ್ಕರ್ಮಿಗಳಿಂದ ದಾಳಿ

ವಾರಣಾಸಿ:ಏ-15: ಕಾಮನ್‌ವೆಲ್ತ್‌‌ ಗೇಮ್ಸ್‌‌ನಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿರುವ ಪೂನಂ ಯಾದವ್‌ ಮೇತೆ ತವರಿನಲ್ಲಿ ದಾಳಿ ನಡೆಸಲಾಗಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೆಲ ಕಿಡಿಗೇಡಿಗಳು ಪೂನಂ ಯಾದವ್‌ ಮೇಲೆ ದಾಳಿ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌‌ ಗೇಮ್ಸ್‌‌-2018ರಲ್ಲಿ ಪೂನಂ ಯಾದವ್‌ 65 ಕೆಜಿ ವೇಯ್ಟ್‌‌ ಲಿಫ್ಟಿಂಗ್‌‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸದ್ಯ ತವರಿಗೆ ಆಗಮಿಸಿರುವ ಪೂನಂ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದರು.

ಈ ವೇಳೆ ಕೆಲ ದುಷ್ಕರ್ಮಿಗಳು ಪೂನಂ ಯಾದವ್‌ ಮೇಲೆ ದಾಳಿ ಮಾಡಿದ್ದಾರೆ. ಪೂನಂ ರಕ್ಷಣೆಗೆ ಹೋದ ತಂದೆ, ಚಿಕ್ಕಪ್ಪ ಮತ್ತವರ ಸಂಬಂಧಿ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಈ ಮಧ್ಯೆ ಭಾರಿ ಗಲಾಟೆ ನಡೆದು, ಕಲ್ಲು ತೂರಾಟ ಮಾಡಲಾಗಿದೆ. ನಂತರ ವಿಷಯ ತಿಳಿಸಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪೂನಂ ಯಾದವ್‌ ಅವರನ್ನು ಅಪಾಯದಿಂದ ರಕ್ಷಿಸಿದ್ದಾರೆ ಎಂದು ಗ್ರಾಮೀಣ ಎಸ್‌‌ಪಿ ಅಮಿತ್‌ ಕುಮಾರ್‌ ತಿಳಿಸಿದ್ದಾರೆ.

ಪೂನಂ ಯಾದವ್‌ ಅವರ ಹಾಗೂ ಗ್ರಾಮದ ಮುಖ್ಯಸ್ಥರೊಬ್ಬರ ನಡುವೆ ಹಳೆ ಭೂವಿವಾದ ಸಂಬಂಧ ಗಲಾಟೆ ನಡೆಯುತ್ತಿತ್ತು. ಇದರಲ್ಲಿ ಸಂಬಂಧಿಗಳ ಮಕ್ಕಳ ರಕ್ಷಣೆಗೆ ಪೂನಂ ಯಾದವ್‌ ಮುಂದಾಗಿದ್ದರು. ಆಗ ಪೂನಂ ಮೇಲೆ ದಾಳಿ ಮಾಡಲಾಗಿದೆ ಎನ್ನಲಾಗಿದೆ.

Commonwealth Gold Medallist, Poonam Yadav, Attacked In Varanasi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ