ಆಂಧ್ರಕ್ಕೆ ವಿಶೇಷ ಸ್ಥಾನಕ್ಕೆ ಆಗ್ರಹ: ಪ್ರಧಾನಿ ಮೋದಿ ವಿರುದ್ಧ ಉಪವಾಸ ಸತ್ಯಾಗ್ರಹ ಸಾರಿದ ಚಂದ್ರಬಾಬು ನಾಯ್ಡು

ಅಮರಾವತಿ:ಏ-15; ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಟಿಡಿಪಿ ಮುಖ್ಯಸ್ಥ, ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದು, ತಮ್ಮ ಹೋರಾಟ ಏನಿದ್ದರೂ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಎಂದು ಘೋಷಿಸಿದ್ದಾರೆ.

ಗುಂಟೂರು ಜಿಲ್ಲೆಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ನಮ್ಮ ವಿಶೇಷ ಸ್ಥಾನಮಾನ ಬೇಡಿಕೆಗೆ ಸ್ಪಂದಿಸದ ಕೇಂದ್ರ ಸರ್ಕಾರದ ವಿರುದ್ಧ ಏ.20ರಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಏ.20 ರಂದು ನನ್ನ ಜನ್ಮ ದಿನವಾಗಿದ್ದು, ಅಂದು ಮುಂಜಾನೆಯಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದ ಚಂದ್ರಬಾಬು, ಸಂಸತ್‌ ಕಲಾಪ ವ್ಯರ್ಥ ಖಂಡಿಸಿ ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಉಪವಾಸ ನಡೆಸಿದ್ದರು. ಆದರೆ, ಸಂಸತ್‌ ಕಲಾಪ ಹಾಳಾಗಲು ಪ್ರಧಾನಿ ಮೋದಿ ಅವರೇ ಕಾರಣವೆಂದು ದೂರಿದರು.

ಇದೇ ವೇಳೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಟಿಡಿಪಿ ಸಹ ಮುಖ್ಯವಾಗಿತ್ತು. ಮುಂದೆ ಕೂಡ ನಮ್ಮ ಪಕ್ಷ ನಿರ್ಣಯ ಪಾತ್ರ ವಹಿಸುತ್ತದೆ ಎಂದು ಚಂದ್ರಬಾಬು ಭವಿಷ್ಯ ನುಡಿದರು.

Andhra CM Naidu,fast on April 20, ‘fight against Centre, PM Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ