
ನವದೆಹಲಿ, ಏ.14- ಖ್ಯಾತ ಪಂಜಾಬಿ ಗಾಯಕ ಪರ್ಮೀಶ್ ವರ್ಮಾ ಅವರಿಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿದ ಘಟನೆ ಮೊಹಾಲಿಯಲ್ಲಿ ನಡೆದಿದೆ.
ಪರ್ಮೀಶ್ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮೊಹಾಲಿಯ ಸೆಕ್ಟರ್ 91 ಬಳಿ ಅಪರಿಚಿತರು ಅವರಿಗೆ ಗುಂಡಿಕ್ಕಿದ್ದಾರೆ. ಪರ್ಮೀಶ್ ಕಾಲಿಗೆ ಗಾಯವಾಗಿದೆ. ಘಟನೆ ನಡೆದಾಗ ಪರ್ಮೀಶ್ ಜೊತೆ ಸ್ನೇಹಿತರೊಬ್ಬರು ಇದ್ದರು ಎಂದು ಎಂದು ಹಿರಿಯ ಪೆÇಲೀಸ್ ಅಧಿಕಾರಿ ಕುಲ್ ದೀಪ್ ಚಾಹಲ್ ಹೇಳಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ವರ್ಮಾರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.