ನವದೆಹಲಿ, ಏ.14-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 127ನೇ ಜನ್ಮ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ.
ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಡಾ.ಅಂಬೇಡ್ಕರ್ ಜಯಂತಿಯನ್ನು ವಿವಿಧ ಸಂಘಟನೆಗಳು ಅದರಲ್ಲೂ ದಲಿತರು ಆಚರಿಸಿ, ಸಂವಿಧಾನ ಶಿಲ್ಪಿಯ ಗುಣಗಾನ ಮಾಡಿದರು.
ಜನ್ಮ ಜಯಂತಿ ಪ್ರಯುಕ್ತ ವಿವಿಧೆಡೆ ರ್ಯಾಲಿಗಳು, ಸಭೆ-ಸಮಾರಂಭಗಳು, ಜಾಗೃತಿ ಅಭಿಯಾನಗಳು ನಡೆದವು. ಅಂಬೇಡ್ಕರ್ ಪತ್ರಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು.
ದೇಶದ ವಿವಿಧೆಡೆ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಮತ್ತು ದೌರ್ಜನ್ಯ ಪ್ರಕರಣಗಳನ್ನು ಸಭೆಗಳಲ್ಲಿ ಖಂಡಿಸಲಾಗಿದೆ.






