ಬೆಂಗಳೂರು, ಏ.14-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿವಿಧ ಕ್ರೀಡಾಂಗಣದಲ್ಲಿ ಎಪ್ರಿಲ್ 16 ರಿಂದ ಮೇ 6 ರವರೆಗೆ 21 ದಿನಗಳ ಉಚಿತ ಕ್ರೀಡಾ ಬೇಸಿಗೆ ತರಬೆತಿ ಶಿಬಿರವನ್ನು ಆಯೋಜಿಸಿದೆ.
ಬೆಂಗಳೂರು ಪೂರ್ವ : ಜೂಡೋ, ಖೋ-ಖೋ ಕ್ರೀಡೆಯನ್ನು ಮಹದೇವಪುರ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಸಲಾಗುವುದು. ತರಬೇತುದಾರರಾಗಿ ಸದಾನಂದ ಕಾರ್ಯ ನಿರ್ವಹಿಸಲಿದ್ದಾರೆ. (9740819644) ಹಾಗೂ ಹ್ಯಾಂಡ್ಬಾಲ್ ಕ್ರೀಡೆಯನ್ನು ಸರ್ಕಾರಿ ಫ್ರೌಢಶಾಲೆ ಕಾಡುಗೋಡಿಯಲ್ಲಿ ನಡೆಸಲಾಗುವುದು. ತರಬೇತುದಾರರಾಗಿ ಆರ್.ಸುರೇಶ್ (9590467435,9886553737) ನೇಮಿಸಲಾಗಿದೆ.
ಬೆಂಗಳೂರು ದಕ್ಷಿಣ : ಹ್ಯಾಂಡ್ಬಾಲ್, ವಾಲಿಬಾಲ್, ಕ್ರಿಕೆಟ್, ಥ್ರೋಬಾಲ್ ಕ್ರೀಡೆಯನ್ನು ಹೊನಗನಹಟ್ಟಿ ಕ್ರೀಟಾಂಗಣ ತಾವರೇಕೆರೆಯಲ್ಲಿ ನಡೆಸಲಾಗುವುದು ಹಾಗೂ ತರಬೇತುದಾರರಾಗಿ ಕೆ.ಶ್ರೀನಿವಾಸನ್ (9845989111), ಡಾ.ಗಂಗಾಧರಯ್ಯ(9900556068) ರವರನ್ನು ನೇಮಿಸಲಾಗಿದೆ.
ಕಬ್ಬಡಿ ಖೋ-ಖೋ ಕ್ರೀಡೆಯನ್ನು ಸರ್ಕಾರಿ ಹೈಸ್ಕೂಲ್ ಮೈದಾನ ಅನೇಕಲ್ನಲ್ಲಿ ನಡೆಸಲಾಗುವುದು ತರಬೇತುದಾರರನ್ನಾಗಿ ಶ್ರೀ ಬೂತರಾಯಪ್ಪ (9880973488) ರವರನ್ನು ನೇಮಿಸಲಾಗಿದೆ.
ಬೆಂಗಳೂರು ಉತ್ತರ : ಪುಟ್ಬಾಲ್, ಹ್ಯಾಂಡ್ಬಾಲ್, ಕ್ರೀಡೆಯನ್ನು ಡಾ.ಅಂಬೇಡ್ಕರ್ ಮಿನಿ ಪುಟ್ಬಾಲ್ ಕ್ರೀಡಾಂಗಣ, ಡಿ.ಜಿ.ಹಳ್ಳಿ, ಹಾಗೂ ಸತ್ಯಸಾಯಿ ಶಾಲಾ ಆಟದ ಮೈದಾನ, ಸಿಂಗನಾಯಕನಹಳ್ಳಿ ಹಾಗೂ ವಾಲಿಬಾಲ್, ಸ್ಕೇಟಿಂಗ್ ಕ್ರೀಡೆಯನ್ನು ನವೋದಯ ವಸತಿ ಶಾಲೆ ಆಟದ ಮೈದಾನ ಬಾಗಲೂರು ನಡೆಸಲಾಗುವುದು ಹಾಗೂ ತರಬೇತುದಾರರಾಗಿ ರಾಮಸ್ವಾಮಿ (9980917231) ಆರ್. ಸುರೇಶ್ (9590467435, 9886553737) ಕಾರ್ಯ ನಿರ್ವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀಕಂಠೀರವ ಕ್ರೀಡಾಂಗಣ, ಕಸ್ತೂರಿಬಾ ರಸ್ತೆ, ಬೆಂಗಳೂರು. ದೂ. ಸಂಖ್ಯೆ :- 080-22239771 / 9480886545 ಯನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.