ಪೆಟ್ರೋಲ್ ಬಾಂಬ್ ಎಸೆದು ಸ್ಫೋಟ ಭಾರತೀಯ ಮೂಲದ ಕುಟುಂಬವೊಂದರ ಐವರು ಹತ

ಜೋಹಾನ್ಸ್‍ಬರ್ಗ್, ಏ.14-ಗಲಭೆಕೋರರ ಗುಂಪೆÇಂದು ಮನೆಯೊಂದರ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಸ್ಫೋಟಿಸಿದ್ದರಿಂದ ಭಾರತೀಯ ಮೂಲದ ಕುಟುಂಬವೊಂದರ ಐವರು ಹತರಾಗಿರುವ ಘಟನೆ ದಕ್ಷಿಣ ಆಫ್ರಿಕಾದ ಪೀಟರ್‍ಮರೀಟ್ಸ್‍ಬರ್ಗ್‍ನಲ್ಲಿ ನಡೆದಿದೆ.
25 ವರ್ಷಗಳಿಂದಲೂ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಅಜಿಜ್ ಮಂಜ್ರಾ(45), ಅವರ ಪತ್ನಿ ಗೋರಿ ಬೀಬಿ ಹಾಗೂ ಮಕ್ಕಳಾದ ಜುಬೀನಾ(18), ಮೈರುನ್ನೀಸಾ(14) ಹಾಗೂ ಮಹಮದ್ ರಿಜ್ವಾನ್(10) ದುಷ್ಕರ್ಮಿಗಳ ಹಿಂಸಾಕೃತ್ಯಕ್ಕೆ ಬಲಿಯಾಗಿದ್ದಾರೆ.
ಮಳಿಗೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಜಿಜ್ ಕಳೆದ 15 ದಿನಗಳ ಹಿಂದಷ್ಟೇ ತಾವು ಖರೀದಿಸಿದ್ದ ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು.
ಒಂದೇ ಕುಟುಂಬದ ಐವರನ್ನು ಪೆಟ್ರೋಲ್ ಬಾಂಬ್ ಮೂಲಕ ಹತ್ಯೆ ಮಾಡಿರುವ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ