ನವದೆಹಲಿ, ಏ.13-ರಾಜಧಾನಿ ದೆಹಲಿಯ ಬಿಟ್‍ಕಾಯಿನ್(ಕ್ರಿಪೆÇ್ಟ ಕರೆನ್ಸಿ) ವಿನಿಮಯ ಸಂಸ್ಥೆಯೊಂದು 20 ಕೋಟಿ ರೂ. ಮೌಲ್ಯದ ಭಾರೀ ದರೋಡೆಯಿಂದ ಕಂಗಾಲಾಗಿದೆ. ಇದನ್ನು ದೇಶದ ಅತಿದೊಡ್ಡ ಬಿಟ್‍ಕಾಯಿನ್ ರಾಬರಿ ಎಂದು ಬಣ್ಣಿಸಲಾಗಿದೆ.
ಪ್ರತಿಷ್ಠಿತ ಬಿಟ್‍ಕಾಯಿನ್ ವಿನಿಮಯ ವ್ಯಾಪಾರ ಕೇಂದ್ರವೊಂದಕ್ಕೆ ಕನ್ನ ಹಾಕಿರುವ ಹ್ಯಾಕರ್‍ಗಳು 440 ಕಾಯಿನ್‍ಗಳನ್ನು ದೋಚಿದ್ದಾರೆ. ಇದರಿಂದ ಸಂಸ್ಥೆಗೆ 20 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಣ ನಷ್ಟವಾಗಿದೆ.
ದೇಶಾದ್ಯಂತ ಎರಡು ಲಕ್ಷ ಬಳಕೆದಾರರನ್ನು ಹೊಂದಿರುವ ಈ ಸಂಸ್ಥೆಗೆ ಹ್ಯಾಕ್ ಮಾಡಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಟ್‍ಕಾಯಿನ್‍ಗಳನ್ನು ರಾಬರಿ ಮಾಡಲಾಗಿದೆ. ಇದರಿಂದ ಸಂಸ್ಥೆಯ ಮುಖ್ಯಸ್ಥರು ಮತ್ತು ಗ್ರಾಹಕರು ಕಂಗಾಲಾಗಿದ್ದಾರೆ.
ಈ ವ್ಯಾಲೆಟ್ ಹಾಕ್ ಹಿಂದೆ ವ್ಯವಸ್ಥಿತ ಜಾಲವೊಂದರ ಕೈವಾಡ ಇದೆ ಎಂದು ಶಂಕಿಸಲಾಗಿದ್ದು, ಸೈಬರ್ ಪೆÇಲೀಸರು ತನಿಖೆ ಚುರುಕುಗೊಳಿಸಿದ್ದಾರೆ.