ಬೆಂಗಳೂರು ಆ13: ಜಮ್ಮುವಿನಲ್ಲಿ ದುಷ್ಕರ್ಮಿಗಳು ಎಂಟು ವರ್ಷದ ಬಾಲೆ ಅಸಿಫಾಳನ್ನು ಎಳೆದೊಯ್ದು ದೇವಸ್ಥಾನದೊಳಗೆ ಕೂಡಿ ಹಾಕಿ. ಮಾದಕ ದ್ರವ್ಯ ತಿನ್ನಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಎಂಇಪಿ ರಾಷ್ಟ್ರೀಯ ಅಧ್ಯಕ್ಷೆ ಡಾ.ನೌಹೀರಾ ಶೇಕ್ , ಮೃತ ಬಾಲೆ ಆಸಿಫಾ ಮತ್ತು ಆಕೆಯ ಕುಟುಂಬಕ್ಕೆ ಕೂಡಲೇ ನ್ಯಾಯ ದಕ್ಕಬೇಕು. ಹೆಣ್ಣಿನ ಮೇಲೆ ದೇಶದಲ್ಲಿ ಇಂತಹ ಅನ್ಯಾಯ ಮತ್ತು ದೌರ್ಜನ್ಯ ಗಳು ಕೊನೆಗಾಣಬೇಕು. ತಪ್ಪಿತಸ್ಧರಿಗೆ ಉಗ್ರ ಶಿಕ್ಷೆಯಾಗುವಂತೆ ಆಡಳಿತ ಯಂತ್ರಾಂಗ ಮತ್ತು ಜಾಗೃತ ಸಮಾಜ ಕಟ್ಟೆಚ್ಚರ ವಹಿಸಬೇಕು ಒತ್ತಾಯಿಸಿದ್ದಾರೆ.
ಇಂತಹ ಅನ್ಯಾಯಗಳ ವಿರುದ್ಧ ಹೋರಾಡಲೆಂದೇ ತಾನು ರಾಜಕೀಯ ಪ್ರವೇಶ ಮಾಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.