ನವದೆಹಲಿ:ಏ-೧೩: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ರಾಜ್ ಕುಮಾರ್ ರಾವ್ ನಟನೆಯ ಬಾಲಿವುಡ್ ಚಿತ್ರ ನ್ಯೂಟನ್ ಅತ್ಯುತ್ತಮ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.
ದೆಹಲಿಯ ಶಾಸ್ತ್ರಿ ಭವನದಲ್ಲಿರುವ ಪಿಐಬಿ ಕಾನ್ಫರೆನ್ಸ್ ರೂಮ್ ನಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ನ್ಯೂಟನ್ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಾಚಿದೆ.
ನಿರ್ದೇಶಕ ಎಸ್ ಎಸ್ ರಾಜಮೌಳಿ ನಿರ್ದೇಶನ ಬಾಹುಬಲಿ ಚಿತ್ರ ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್ ವಿಭಾಗದಲ್ಲಿ ಪ್ರಶಸ್ತಿ ಬಾಚಿದ್ದು, ಅತ್ಯುತ್ತಮ ಹಿನ್ನಲೆ ಸಂಗೀತ ವಿಭಾಗದ ಪ್ರಶಸ್ತಿಗೆ ಮಾಮ್ ಚಿತ್ರಕ್ಕಾಗಿ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಪಾತ್ರರಾಗಿದ್ದಾರೆ. ನಟಿ ತಾರಾ ಮತ್ತು ನಟ ದೇವರಾಜ್ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರ ಅತ್ಯುತ್ತಮ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಶಸ್ತಿ ಪಟ್ಟಿ ಹೀಗಿದೆ:
ಅತ್ಯುತ್ತಮ ನಾನ್ ಫೀಚರ್ ಫಿಲ್ಮ್- ವಾಟರ್ ಬೇಬಿ
ಅತ್ಯುತ್ತಮ ಶೈಕ್ಷಣಿಕ ಚಿತ್ರ – ದ ಗರ್ಲ್ ವಿ ಆರ್ ಅಂಡ್ ದ ವುಮೆನ್ ವಿ ಆರ್
ಅತ್ಯುತ್ತಮ ಕಲಾ ಮತ್ತು ಸಾಂಸ್ಕೃತಿಕ ಚಿತ್ರ- ಗಿರಿಜಾ (ಎ ಲೈಫ್ ಆಫ್ ಮ್ಯೂಸಿಕ್)
ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರ- ಐ ಆ್ಯಮ್ ಬೊಮ್ಮಿ ಅಂಡ್ ವೇಲ್ ಡನ್
ಅತ್ಯುತ್ತಮ ಕಿರುಚಿತ್ರ (ಫಿಕ್ಷನ್)- ಮರಾಠಿ ಭಾಷೆಯ ಮಯ್ಯಾತ್
ವಿಶೇಷ ಪ್ರಶಸ್ತಿ – ಮೋರ್ಕಿಯಾ (ಮರಾಠಿ), ಹೆಲ್ಲೋ ಆರ್ಸಿ (ಒರಿಯಾ), ಟೇಕ್ ಆಫ್ ಗಾಟ್ (ಮಲಯಾಳಂ)
ಅತ್ಯುತ್ತಮ ಜಾಸ್ಸರಿ ಚಿತ್ರ – ಸಿಂಜಾರ್
ಅತ್ಯುತ್ತಮ ಒರಿಯಾ ಚಿತ್ರ – ಹೆಲ್ಲೋ ಆರ್ಸಿ
ಅತ್ಯುತ್ತಮ ತುಳು ಚಿತ್ರ- ಪಡ್ಡಾಯಿ
ಅತ್ಯುತ್ತಮ ಕನ್ನಡ ಚಿತ್ರ – ಹೆಬ್ಬೆಟ್ಟು ರಾಮಕ್ಕ
ಅತ್ಯುತ್ತಮ ತೆಲುಗು ಚಿತ್ರ – ದಿ ಘಾಜಿ ಅಟ್ಯಾಕ್
ಅತ್ಯುತ್ತಮ ಸಾಹಸ ನಿರ್ದೇಶಕ ಪ್ರಶಸ್ತಿ- ರಾಜಮೌಳಿ ನಿರ್ದೇಶನದ ಬಾಹುಬಲಿ
ಅತ್ಯುತ್ತಮ ಕೊರಿಯೋಗ್ರಫಿ- ಟಾಯ್ಲೆಟ್ ಏಕ್ ಪ್ರೇಮಕಥಾ ಚಿತ್ರದ ಗೋರಿ ತೂ ಲಾಥ್ ಮಾರಿ ಹಾಡು
ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ಸ್ – ಬಾಹುಬಲಿ
ಅತ್ಯುತ್ತಮ ಸಂಗೀತ ನಿರ್ದೇಶನ – ಮಣಿ ರತ್ನಂ ನಿರ್ದೇಶನದ ಕಾಟ್ರು ವೆಲಿಯಿಡಯ್
ಅತ್ಯುತ್ತಮ ಹಿನ್ನಲೆ ಸಂಗೀತ – ಮಾಮ್ ಚಿತ್ರ, ಸಂಗೀತ ನಿರ್ದೇಶಕ ಎಆರ್ ರೆಹಮಾನ್
ಅತ್ಯುತ್ತಮ ಮೇಕಪ್ ಆರ್ಟಿಸ್ಟ್- ಬೆಂಗಾಳಿ ಚಿತ್ರ ನಗರ್ ಕೀರ್ತನ್
65th National Film Awards,’Hebbettu Ramakka’ named Best Kannada film,Newton Best hindhi film